Thursday, May 2, 2024
spot_imgspot_img
spot_imgspot_img

ಸುಳ್ಯ: ಬ್ಲಿಝ್ ಲಂಡನ್ ಪ್ರಿಸ್ಕೂಲ್ ನಲ್ಲಿ ಪೋಷಕರ ಕಾರ್ಯಾಗಾರ

- Advertisement -G L Acharya panikkar
- Advertisement -
vtv vitla
vtv vitla
vtv vitla

ಸುಳ್ಯ: ಗಾಂಧಿನಗರ ಗ್ರೀನ್‌ ವ್ಯೂವ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೊಸದಾಗಿ ಆರಂಭಗೊಂಡ ಬ್ಲಿಝ್ ಲಂಡನ್ ಪ್ರೀ ಸ್ಕೂಲ್ ನ ಪೋಷಕರ ಕಾರ್ಯಾಗಾರವು ಗ್ರೀನ್ ವ್ಯೂ ಆಡಿಟೋರಿಯಂ ನಲ್ಲಿ ಶಾಲಾ ಸಂಚಾಲಕ ಕೆ.ಎಂ. ಮುಹ್ಯದ್ದೀನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಶಾಲಾ ಮುಖ್ಯೋಪಾಧ್ಯಾಯ ಎಂ.ಎಸ್.ಎಂ ಅಬ್ದುಲ್ ರಹೀಂ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಬ್ಲಿಝ್ ಲಂಡನ್ ಪ್ರಿಸ್ಕೂಲ್ ನೆಟ್ವರ್ಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ರಝಾ ಬೆಂಗಳೂರು ಮಾತನಾಡಿ ಇದು ಮಕ್ಕಳಿಗೆ ಆಟದೊಂದಿಗೆ ಪಾಠವನ್ನು ಕಲಿಸುವ ಆಧುನಿಕ ಕಲಿಕಾ ವಿಧಾನಗಳನ್ನು ಹೊಂದಿದ ಮನಃಶಾಸ್ತ್ರಜ್ಞರ ತಂಡವೊಂದು ರಚಿಸಿದ ಪಠ್ಯಕ್ರಮವಾಗಿದ್ದು, ಮಕ್ಕಳಿಗೆ ಯಾವುದೇ ಒತ್ತಡಗಳಿಲ್ಲದೆ ಕಲಿಯಬಹುದು ಎಂದರು.

vtv vitla

ಬ್ಲಿಝ್ ಲಂಡನ್ ಪ್ರೀಸ್ಕೂಲ್ ನೆಟ್ವರ್ಕ್ ನ ಡೈರೆಕ್ಟರ್ ಉಮರುಲ್ ಫಾರೂಕ್ ರಝಾ ಅಮ್ಜದಿ ಮಾತನಾಡಿ ಬ್ಲಿಝ್ ಲಂಡನ್ ನ ವಿಶೇಷತೆಗಳ ಬಗ್ಗೆ ವಿವರಿದರು. ಅಧ್ಯಾಪಕರು ಹಾಗೂ ಪೋಷಕರಿಗೆ ನಿರಂತರ ಟ್ರೈನಿಂಗ್, ಮಾಂಟೆಸ್ಸರಿ ಮೆಥಡ್ ಗಳು , ಕುರ್’ಆನ್ ಕಲಿಕೆ, ಕನ್ನಡ, ಇಂಗ್ಲಿಷ್, ಗಣಿತ ಕಲಿಕೆಗಾಗಿ ಸುಲಭ ವಿಧಾನಗಳು, ತಿಂಗಳಿಗೊಮ್ಮೆ ಮಕ್ಕಳಿಗೆ ಪ್ರಕೃತಿಯೆಡೆಗೆ ನಡಿಗೆ, ಮಕ್ಕಳಿಗೆ ಗುರಿಯ ಬಗ್ಗೆ ತಿಳುವಳಿಕೆ ಹೀಗೆ ಇನ್ನೂ ಹಲವಾರು ವಿಶೇಷತೆಗಳು ಇದರಲ್ಲಡಗಿರುವುದೆಂದರು.

ಕಾರ್ಯಕ್ರಮದಲ್ಲಿ ಗ್ರೀನ್‌ ವ್ಯೂವ್ ಇಂಗ್ಲಿಷ್ ಮೀಡಿಯಂ ಶಾಲೆಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಅರ್ಲಡ್ಕ ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!