Friday, August 7, 2026
spot_imgspot_img
spot_imgspot_img

ಸುಳ್ಯ: ರಿಕ್ಷಾ- ಬೈಕ್ ಢಿಕ್ಕಿ ವಿದ್ಯಾರ್ಥಿ ಸಾವು

- Advertisement -
- Advertisement -
astr

ಸುಳ್ಯ: ಬೈಕ್ ಮತ್ತು ರಿಕ್ಷಾ ನಡುವೆ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ

ಅಪಘಾತದಲ್ಲಿ ಬೈಕ್ ಸವಾರ, ಐಟಿಐ ವಿದ್ಯಾರ್ಥಿ ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಪುತ್ರ ಪ್ರತೀಕ್ (19) ಮೃತಪಟ್ಟಿದ್ದಾರೆ.

ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡತ್ತಿರುವ ತೇಜಸ್‌ ಎಂಬ ಯುವಕನ ಜೊತೆ ಇಂದು ಬೆಳಗ್ಗೆ ಕಲ್ಲುಗುಂಡಿಯಿಂದ ಬೈಕ್‌ನಲ್ಲಿ ಪ್ರತೀಕ್ ಸುಳ್ಯದ ಕಡೆಗೆ ಬರುತ್ತಿದ್ದರು. ಈ ವೇಳೆ ಪರಿವಾರಕಾನ ತಿರುವಿನಲ್ಲಿ ಆಟೋರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ ಸವಾರರಿಬ್ಬರೂ ಗಂಭೀರ ಗಾಯಗೊಂಡಿದ್ದು, ಕೂಡಲೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಪ್ರತೀಕ್ ಮೃತಪಟ್ಟರು. ಗಂಭೀರ ಗಾಯಗೊಂಡಿರುವ ತೇಜಸ್‌ರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

- Advertisement -

Related news

error: Content is protected !!