Sunday, June 21, 2026
spot_imgspot_img
spot_imgspot_img

ಸುಳ್ಯ: ವಿಷ ಸೇವಿಸಿ ಪೌರಕಾರ್ಮಿಕ ಆತ್ಮಹತ್ಯೆ..! ಕಾರಣ ಅಸ್ಪಷ್ಟ

- Advertisement -
- Advertisement -

ಸುಳ್ಯ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ದುಗಲಡ್ಕ ಎಂಬಲ್ಲಿ ನಡೆದಿದೆ. ಯುವಕನ್ನು ದುಗಲಡ್ಕದ ನೀರಬಿದಿರೆ ನಿವಾಸಿ ದೇವನಾಥ ಎಂದು ಗುರುತಿಸಲಾಗಿದೆ.

ದೇವನಾಥ ಅವರು ನಗರ ಪಂಚಾಯತ್‌ನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ವಿಷ ಸೇವಿಸಿದ್ದು ಕೂಡಲೇ ವಿಷಯ ತಿಳಿದ ಸ್ನೇಹಿತರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆದಾಗಲೇ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Related news

error: Content is protected !!