Friday, April 26, 2024
spot_imgspot_img
spot_imgspot_img

ಸ್ವೀಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ..! ಬಾಹುಬಲಿ ಚೆಲುವೆಯ ಸಾಧನೆ, ಜೀವನ ಚರಿತ್ರೆಯ ಸಂಕ್ಷಿಪ್ತ ನೋಟ…!

- Advertisement -G L Acharya panikkar
- Advertisement -

ಬಹುಭಾಷಾ ನಟಿ, ತುಳುನಾಡಿನ ಕುವರಿ ಭಾರತೀಯ ಸಿನಿ ರಂಗದಲ್ಲೇ ತನ್ನದೇ ಆದ ರಂಗು ಮೂಡಿಸಿರುವ ಆರುಂಧತಿ, ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಇಂದು ತಮ್ಮ ಹುಟ್ಟುದಿನದ ಸಂಭ್ರಮದಲ್ಲಿದ್ದಾರೆ. ತುಳುನಾಡಿನ ಬಂಟ ಮನೆತನದಲ್ಲಿ ಹುಟ್ಟಿದ ಸುಂದರ ಚೆಲುವೆ ಸಿನೆಮಾ ರಂಗದಲ್ಲಿ ಭಾರೀ ಯಶಸ್ಸನ್ನು ಗಿಟ್ಟಿಸಿಕೊಂಡವರು. ಸಿನೆಮಾ ರಂಗದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಇವರು ಸೂಪರ್‍ ಹಿಟ್ ಚಿತ್ರಗಳ ಸರದಾರೆ ಅಂದರೂ ನೋ ಡೌಟ್‌..!

ಪುತ್ತೂರಿನ ಮು‌ತ್ತು ಅನುಷ್ಕಾ ಶೆಟ್ಟಿ..!

ಕರಾವಳಿಯ ಶ್ರೇಷ್ಟ ಬಂಟ ಮನೆತನಗಳಲ್ಲಿ ಒಂದಾದ ಬೆಳ್ಳಿಪ್ಪಾಡಿ ಮನೆತನದ ಉರುಮಾಲು ಗುತ್ತಿನಲ್ಲಿ ಜನಿಸಿದವರು. ತಾಯಿಯ ಹೆಸರು ಪ್ರಫುಲ್ಲಾ ಶೆಟ್ಟಿ, ತಂದೆ ಎ ಎನ್ ವಿಠ್ಠಲ್ ಶೆಟ್ಟಿ. ಪುತ್ತೂರಿನಲ್ಲಿ ಹುಟ್ಟಿ ಬೆಳೆದ ಇವರು ಪಿಯು ಶಿಕ್ಷಣವನ್ನು ಪುತ್ತೂರಿನಲ್ಲೇ ಪೂರೈಸಿದವರು.

ಸಿನೆಮಾದಲ್ಲಿ ಮಿಂಚಿದ ತುಳುನಾಡ ಬೆಡಗಿ..!
2005 ರಲ್ಲಿ ತೆಲುಗು ಸಿನೆಮಾ “ಸೂಪರ್‍” ಮೂಲಕ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು. ಆ ಬಳಿಕ ಮುಟ್ಟಿದೆಲ್ಲಾ ಚಿನ್ನ ಎಂಬಂತೆ ಇವರು ನಟಿಸಿದ ಸಿನೆಮಾಗಳು ಹಿಟ್ ಆದವು. ಅದರ ಹಿಂದೆ ಅವರ ಸತತ ಪರಿಶ್ರಮವೂ ಅಡಗಿದೆ. ಮಹಾನಂದಿ, ಸ್ಟಾಲಿನ್, ಡಾನ್, ಸಿಂಗಮ್, ವೇದಂ, ಭಾಗಮತಿ, ಬಾಹುಬಲಿ ಹೀಗೆ ಅನೇಕ ಸಿನೆಮಾದಲ್ಲಿ ಅದ್ಭುತವಾಗಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡವರು.

ಈ ಸಿನೆಮಾವನ್ನು ಮರೆಯುವ ಮಾತೇ ಇಲ್ಲ…!
ಸ್ವೀಟಿ ನಟನೆಯ ಈ ಸಿನೆಮಾವನ್ನು ಪ್ರೇಕ್ಷಕರು ಎಂದಿಗೂ ಕೂಡ ನೆನಪಿಸಿಕೊಳ್ಳುತ್ತಾರೆ.

ಬಾಹುಬಲಿ: ಇದು ಅನುಷ್ಕಾ ಶೆಟ್ಟಿ ಅವರಿಗೆ ವಿಶ್ವಾದ್ಯಂತ ಖ್ಯಾತಿ ತಂದುಕೊಟ್ಟ ಸಿನಿಮಾ. ಈ ಚಿತ್ರದಲ್ಲಿ ಅವರದ್ದು ದೇವಸೇನಾ ಪಾತ್ರ. ಅವರ ಮತ್ತು ಪ್ರಭಾಸ್​ ಜೋಡಿ ಎಂದರೆ ಅಭಿಮಾನಿಗಳಿಗೆ ಹೆಚ್ಚು ಇಷ್ಟ.

ವೇದಂ: ಕ್ರಿಷ್​ ನಿರ್ದೇಶನದ ಈ ಸಿನಿಮಾ 2010ರಲ್ಲಿ ತೆರೆಕಂಡಿತು. ಸರೋಜಾ ಎಂಬ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡರು. ಈ ಚಿತ್ರ ಉತ್ತಮ ವಿಮರ್ಶೆ ಪಡೆದುಕೊಂಡಿತು.

ಜೀರೋ ಸೈಜ್​: ಅನುಷ್ಕಾ ಶೆಟ್ಟಿ ಅವರು ಗ್ಲಾಮರ್​ ಹಂಗು ತೊರೆದು ಮಾಡಿದ ಸಿನಿಮಾ ‘ಜೀರೋ ಸೈಜ್​’. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಿಲ್ಲವಾದರೂ ನಟನೆ ದೃಷ್ಟಿಯಿಂದ ಇದು ಅವರ ಬೆಸ್ಟ್​ ಸಿನಿಮಾಗಳಲ್ಲೊಂದು. ಈ ಚಿತ್ರಕ್ಕಾಗಿ ಅನುಷ್ಕಾ 25 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದು ಅವರು ತಮ್ಮ ವೃತ್ತಿಗೆ ಎಷ್ಟು ಸಮರ್ಪಿತರಾಗಿದ್ದಾರೆ ಎಂಬುದರ ಬಗ್ಗೆ ಹೇಳುತ್ತದೆ. ಬಳಿಕ ತೂಕ ಇಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.

ರುದ್ರಮದೇವಿ: 2015ರಲ್ಲಿ ತೆರೆಕಂಡ ‘ರುದ್ರಮದೇವಿ’ ಸಿನಿಮಾದಲ್ಲಿನ ಅನುಷ್ಕಾ ಶೆಟ್ಟಿ ಅವರು ನಟನೆ ಎಲ್ಲರಿಗೂ ಇಷ್ಟ ಆಯಿತು. ಐತಿಹಾಸಿಕ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಅದ್ಭುತ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದಿತ್ತು. ಇದೊಂದು ಸ್ತ್ರೀ ಪ್ರಧಾನ ಚಿತ್ರವಾಗಿದೆ.

ಅರುಂಧತಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳು ‘ಅರುಂಧತಿ’ ಸಿನಿಮಾವನ್ನು ಎಂದಿಗೂ ಮರೆಯುವುದಿಲ್ಲ. ಸೂಪರ್ ನ್ಯಾಚುರಲ್​ ಕಥಾಹಂದರ ಇರುವ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಎರಡು ಶೇಡ್​ನ ಪಾತ್ರ ಮಾಡಿದ್ದಾರೆ. ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಲನಚಿತ್ರಗಳಲ್ಲಿ ಅರುಂಧತಿ ಕೂಡ ಒಂದು. ಅನುಷ್ಕಾ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್​ ನೀಡಿದ ಸಿನಿಮಾ ಇದು.

ಕನ್ನಡ, ತುಳು ನಿರರ್ಗಳವಾಗಿ ಮಾತನಾಡುತ್ತಾರೆ..!
ಸಿಂಪಲ್ ಸ್ವೀಟಿ ಕನ್ನಡ ಮತ್ತು ತುಳು ಮಾತನಾಡುತ್ತಾರೆ. ಜೊತೆಗೆ ಬೇರೆ ಭಾಷೆಗಳನ್ನೂ ಚೆನ್ನಾಗಿ ಮಾತನಾಡುತ್ತಾರೆ. ಹಬ್ಬ ಹರಿದಿನಗಳ ಸಮಯದಲ್ಲಿ ಕನ್ನಡದಲ್ಲೇ ವಿಶ್ ಮಾಡುತ್ತಾರೆ. ಇದರಿಂದಲೇ ಎಲ್ಲಾ ಭಾಷಿಗರಿಗೂ ಇವರೆಂದರೆ ಅಚ್ಚುಮೆಚ್ಚು,.

ಯಾವೆಲ್ಲಾ ಅವಾರ್ಡ್‌ ಗಳಿಸಿಕೊಂಡಿದ್ದಾರೆ ಬಾಹುಬಲಿ ಚೆಲುವೆ
ಇವರ ಮನೋಜ್ಞ ನಟನೆಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿದೆ. Filmfare Award Best Actress, Tamil Nadu State Film Award Special Prize, Dada Saheb Phalke Awards, Kalaimamani Award, TSR Lalitha Kala Parishath Award ಹೀಗೆ ನಾನ ಪ್ರಶಸ್ತಿಗಳು ಅರಸಿ ಬಂದಿವೆ.

ಇಂದು ಅನುಷ್ಕಾ ಶೆಟ್ಟಿ ಅವರು ಇನ್ನೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ. ಪ್ರೇಕ್ಷಕ ವರ್ಗ ಮಾತ್ರವಲ್ಲದೆ ಸಿನಿ ದಿಗ್ಗಜರೂ ಕೂಡ ಇವರ ಮದುವೆ ಕಾರ್ಯಕ್ರಮಕ್ಕೆ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

- Advertisement -

Related news

error: Content is protected !!