Sunday, April 28, 2024
spot_imgspot_img
spot_imgspot_img

ಹಲವು ಆರೋಗ್ಯ ಸಮಸ್ಯೆಗಳಿಗೆ ಸೀತಾಫಲ ರಾಮಬಾಣ

- Advertisement -G L Acharya panikkar
- Advertisement -

ಈ ಹಣ್ಣಿನಲ್ಲಿ ವಿಟಮಿನ್ B6 ಹೇರಳವಾಗಿದ್ದು, ಇದರ ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸುತ್ತದೆ. ಇದರಿಂದ ನಿಮಗೆ ಅಸ್ತಮಾ ರೋಗದ ಸಮಸ್ಯೆಗಳು ತಲೆದೂರುವ ಅಪಾಯ ಕಡಿಮೆಯಾಗುತ್ತದೆ.

vtv vitla
vtv vitla

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಸೀತಾಫಲ ಎಲ್ಲರಿಗೂ ಪರಿಚಿತ ಹಣ್ಣು. ತಿನ್ನಲು ತುಸು ಕಷ್ಟವಾದರೂ, ಈ ಹಣ್ಣಿನಿಂದ ಸಿಗುವ ಬಾಯಿ ರುಚಿ ಮಾತ್ರ ಅಷ್ಟಿಷ್ಟಲ್ಲ. ಅಂದರೆ ರುಚಿಯೊಂದಿಗೆ ಇದು ನಿಮ್ಮ ಆರೋಗ್ಯವನ್ನೂ ಕಾಪಾಡುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಗೊತ್ತಿರಲಿ. ಹೌದು ಸೀತಾಫಲ ನಾನಾ ಸಮಸ್ಯೆಗಳಿಗೆ ರಾಮಬಾಣ ಎಂದರೆ ಒಪ್ಪಲೇಬೇಕು.

ಈ ಹಣ್ಣಿನ ಸೇವನೆಯಿಂದ ಹೆಚ್ಚಿನ ಕ್ಯಾಲೋರಿ ದೊರಕುತ್ತವೆ. ಅಷ್ಟೇ ಅಲ್ಲದೆ ತ್ವಚೆ, ಕೂದಲು, ರಕ್ತದೊತ್ತಡ ನಿರ್ವಹಣೆ, ಮೂಳೆಗಳ ಆರೋಗ್ಯವನ್ನು ಮೊದಲಾದ ಹಲವು ಹೆಚ್ಚಿಸುತ್ತದೆ. ಸೀತಾಫಲದ ಪ್ರಮುಖ ಪ್ರಯೋಜನಗಳು ಯಾವುವು ಇಲ್ಲಿ ವಿವರಿಸಲಾಗಿದೆ.

ಅಸ್ತಮಾ ರೋಗ ತಡೆಯುತ್ತದೆ:

ಈ ಹಣ್ಣಿನಲ್ಲಿ ವಿಟಮಿನ್ B6 ಹೇರಳವಾಗಿದ್ದು, ಇದರ ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸುತ್ತದೆ. ಇದರಿಂದ ನಿಮಗೆ ಅಸ್ತಮಾ ರೋಗದ ಸಮಸ್ಯೆಗಳು ತಲೆದೂರುವ ಅಪಾಯ ಕಡಿಮೆಯಾಗುತ್ತದೆ.

ಹೃದಯಾಘಾತದಿಂದ ರಕ್ಷಿಸುತ್ತದೆ:

ಸೀತಾ ಫಲದಲ್ಲಿ ವಿಟಮಿನ್ B6 ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತದಲ್ಲಿ ಹೀಮೋಸಿಸ್ಟೈನ್ ಸಂಗ್ರಹವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಮುಂದೆ ಹೃದಯಾಘಾತದ ಅಪಾಯ ಬರುವ ಸಾಧ್ಯತೆ ಇರುವುದಿಲ್ಲ.

ಮಧುಮೇಹ ಸಮಸ್ಯೆಗೆ ಪರಿಹಾರ:

ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ. ಹಾಗೆಯೇ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮಧುಮೇಹದ ಸಮಸ್ಯೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:

ಸೀತಾಫಲ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ನಿಯಮಿತವಾಗಿ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ.

- Advertisement -

Related news

error: Content is protected !!