

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರು ತವರಿಗೆ ಆಗಮಿಸಿದ್ದು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪಡೆದ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸ್ವಾಗತ ಸನ್ಮಾನ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಜಬ್ಬರನ್ನು ಗೌರವಪೂರ್ವಕವಾಗಿ ಸನ್ಮಾನ ಮಾಡಿದ್ದಾರೆ. ಶಾಲು ಹೊದಿಸಿ, ಪೇಟಾ ತೊಡಿಸಿ, ಫಲಪುಷ್ಪ ಕೊಟ್ಟು ಗೌರವಾರ್ಪಣೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಹಾಜಬ್ಬ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ ಬೆಂಬಲದ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಆದ ಅನುಭವವನ್ನು ಹಾಜಬ್ಬ ಹಂಚಿಕೊ0ಡಿದ್ದಾರೆ.

“ರಾಷ್ಟ್ರಪತಿಯವರಿAದ ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದ್ಮಶ್ರೀ ಪುರಸ್ಕೃತರಿಗಾಗಿ ಟೀ-ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ನನ್ನ ಬಳಿ ಬಂದ ಪ್ರಧಾನಿ ಮೋದಿಯವರು, ನನ್ನ ಕೈಯನ್ನು ಹಿಡಿದು ಬೇರೆಯವರಿಗೆ ಪರಿಚಯ ಮಾಡಿದರು. ನನ್ನ ಕೈ ಹಿಡಿದು ಮಂಗಳೂರಿನಲ್ಲಿ ಕಿತ್ತಳೆ ಹಣ್ಣನ್ನು ಮಾರಿ ಶಾಲೆ ಕಟ್ಟಿದವರಿವರು,” ಅಂತಾ ಎಲ್ಲರ ಬಳಿ ಪರಿಚಯ ಮಾಡಿಸಿದರು ಅಂತಾ ಹರೇಕಳ ಹಾಜಬ್ಬ ಖುಷಿ ವ್ಯಕ್ತಪಡಿಸಿದ್ದಾರೆ.

ಕೈಗೆ ಗಾಯ ಆಗಿದ್ದು ಹೇಗೆ?: ಹಾಜಬ್ಬ ಎಡಗೈ ಹೆಬ್ಬೆರಳಿಗೆ ಬ್ಯಾಂ ಡೇಜ್ ಕಟ್ಟಿಕೊಂಡಿದ್ದರು. ನಾನು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದೆ. ಇದೇ ಕೈಯನ್ನು ದೇಶದ ಪ್ರಧಾನಮಂತ್ರಿ ಮುಟ್ಟಿದರು. ಅದು ನನಗೆ ಅಪೂರ್ವ ಕ್ಷಣ. ನನಗೆ ಭಾಷೆ ಬರುತ್ತಿರಲಿಲ್ಲ. ಜೊತೆಗಿದ್ದವರು ಪ್ರಧಾನಿಗೆ ನನ್ನನ್ನು ಪರಿಚಯಿಸಿದರು. ದೆಹಲಿಗೆ ಹೋಗುವ ಮೊದಲು ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆ ಮಾಡಲು ನನ್ನ ಮನೆಗೆ ಅಧಿಕಾರಿಗಳು ಬಂದಿದ್ದರು. ಅವರಿಗೆ ಎಳನೀರುಕತ್ತರಿಸಿ ಕೊಡುವಾಗ ಕೈ ಕಡಿದಿತ್ತು ಎಂದು ಹಾಜಬ್ಬ ಮಾಧ್ಯಮದ ಮುಂದೆ ಹೇಳಿದ್ದಾರೆ.


ಬರಿಗಾಲಿನಲ್ಲಿ ಪ್ರಶಸ್ತಿ ಸ್ವೀಕಾರ
ಪ್ರಶಸ್ತಿ ಸ್ವೀ ಕರಿಸಲು ಹೋಗುವಾಗ ನಾನು ಚಪ್ಪಲಿ ಹಾಕದಿರುವುದು ಸತ್ಯ. ದೇಶದ ಪ್ರಧಾನಿ, ರಾಷ್ಟ್ರಪತಿ ಅವರ ಎದುರು ಅತ್ಯುನ್ನತ ಗೌರವ ಸ್ವೀ ಕರಿಸಲು ಹೋಗುವಾಗ ಚಪ್ಪಲಿ ಧರಿಸುವುದು ನನಗೆ ಸರಿ ಕಾಣಲಿಲ್ಲ. ಅದಕ್ಕೆ ಚಪ್ಪಲಿ ತೆಗೆದಿಟ್ಟು ಹೋಗಿದ್ದೆ ಎಂದು ಹಾಜಬ್ಬ ಹೇಳಿಕೊಂಡಿದ್ದಾರೆ.











