Friday, April 26, 2024
spot_imgspot_img
spot_imgspot_img

ಹಾವುಗಳನ್ನೇ ಹಸಿ – ಹಸಿಯಾಗಿ ತಿಂಡಿಯ ತರಹ ತಿನ್ನುವ ವಿಚಿತ್ರ ವ್ಯಕ್ತಿ..!

- Advertisement -G L Acharya panikkar
- Advertisement -

ಒಬ್ಬೊಬ್ಬರ ಆಹಾರ ಪದ್ಧತಿಯೂ ಸಹ ಒಂದೊಂದು ರೀತಿ ಇರುತ್ತದೆ. ಅದರಲ್ಲೂ ಚೀನಾ ಹೆಸರು ಹೇಳಿದಾಗ ಮೊದಲು ನೆನಪಿಗೆ ಬರುವುದು ಚೀನಾದವರು ನೆಲದ ಮೇಲೆ ನಡೆಯುವ, ನೀರಿನಲ್ಲಿ ವಾಸಿಸುವ, ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಜೀವಿಯನ್ನೂ ಅಡುಗೆ ಮಾಡಿ ತಿನ್ನುತ್ತಾರೆ.

ಅದರಲ್ಲೂ ಅವರಿಗೆ ಹಾವು, ಚೇಳುಗಳೆಂದರೆ ವಿಚಿತ್ರವಾದ ಪ್ರೀತಿ. ವಿಷಕಾರಿ ಹಾವುಗಳನ್ನು ಅವರು ಅಲೋವೆರಾದಲ್ಲಿ ಹುರಿದು ತಿನ್ನುತ್ತಾರೆ. ಅದೇ ತರಹ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಹಾವನ್ನು ತಿನ್ನುವ ವಿಡಿಯೋಗಳು ವೈರಲ್ ಆಗಿವೆ.

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಪುತ್ತೂರು ವಲಯದ ಶಣಗಳಗೂಡೂರು ಗ್ರಾಮದಲ್ಲಿ ಹುಳಿಯಾರು ಎಂಬ ದೊಡ್ಡ ಮನೆಯಿದೆ. ಅಲ್ಲಿದ್ದ ಪುಳ್ಳಣ್ಣ ಎಂಬ 60 ವರ್ಷದ ಹಾವು ಪ್ರಿಯನೊಬ್ಬ ಎಲ್ಲಾದರೂ ಹಾವು ಸತ್ತಿದೆಯೇ ಎಂದು ಎಲ್ಲ ಕಡೆಯೂ ಹುಡುಕಾಡುತ್ತಿದ್ದ.

ಆ ಸತ್ತ ಹಾವನ್ನು ಸಮಾಧಿ ಮಾಡಲು ಆತ ಹುಡುಕುತ್ತಿರಬಹುದು ಎಂದು ಊರಿನವರು ಅಂದುಕೊಂಡಿದ್ದರು. ಆದರೆ, ಆತ ಹಾವುಗಳನ್ನು ಪ್ರೀತಿಸುವುದು ಅವುಗಳನ್ನು ತಿನ್ನುವ ಕಾರಣಕ್ಕೆ ಎಂಬುದು ಅವರ್‍ಯಾರಿಗೂ ಗೊತ್ತಿರಲಿಲ್ಲ. ಆ ವ್ಯಕ್ತಿ ಎಲ್ಲಾದರೂ ಸತ್ತ ಹಾವು ಕಂಡರೆ ಅದಕ್ಕೆ ಹುಳಿ ಹಾಕಿ ತಿನ್ನುತ್ತಿದ್ದ. ಈ ರೀತಿ ಹಲವಾರು ವರ್ಷಗಳಿಂದ ಆತ ಹಾವುಗಳನ್ನು ತಿನ್ನುತ್ತಿದ್ದ. ಆದರೆ, ಆ ಊರಿನವರಿಗೆ ಈ ವಿಷಯ ಕೆಲವು ದಿನಗಳ ಹಿಂದಷ್ಟೇ ಗೊತ್ತಾಗಿದೆ.

ಎರಡು ದಿನಗಳ ಹಿಂದೆ ಆ ಗ್ರಾಮದಲ್ಲಿ ಸತ್ತ ಹಾವಿನ ವಿಡಿಯೋ ತೆಗೆದಿದ್ದ ಕೆಲವು ಯುವಕರು ಸತ್ತ ಹಾವನ್ನು ಜಗಿದು ತಿನ್ನುತ್ತಿರುವ ಪುಳ್ಳಣ್ಣನ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಅದನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ, ಇನ್ನು ಕೆಲವರು ಬಾಯಿಗೆ ಬಂದಂತೆ ಉಗಿದಿದ್ದಾರೆ.

ಆತ ಎಲ್ಲಿಯಾದರೂ ಹಾವು ಸತ್ತರೆ ಅದನ್ನು ತಂದು ತಿನ್ನುತ್ತಾನೆ. ಕೆಲವರು ಪುಳ್ಳಣ್ಣನನ್ನು ನೋಡಿ ಅಸಹ್ಯಪಟ್ಟು ಅಲ್ಲಿಂದ ಓಡಿ ಹೋಗುತ್ತಾರೆ. ಹಸಿ ಹಸಿಯಾಗಿ ಹಾವನ್ನು ತಿನ್ನುವ ಆತನನ್ನು ಕಂಡರೆ ಈಗ ಊರಿನವರಿಗೆ ಆತಂಕ, ಅಚ್ಚರಿ, ಕುತೂಹಲ. ಹಾವು ತಿನ್ನುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪುಳ್ಳಣ್ಣನೂ ಫೇಮಸ್ ಆಗಿದ್ದಾರೆ.

vtv vitla
vtv vitla
- Advertisement -

Related news

error: Content is protected !!