Friday, April 26, 2024
spot_imgspot_img
spot_imgspot_img

​ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ; ಯಾವ ರಾಜ್ಯದಲ್ಲಿ ಹೇಗಿದೆ ಸ್ಥಿತಿಗತಿ!?

- Advertisement -G L Acharya panikkar
- Advertisement -
driving

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ 40 ರೈತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಇಂದು ನೀಡಿರುವ ಭಾರತ್ ಬಂದ್‌ಗೆ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಉಭಯ ರಾಜ್ಯಗಳಲ್ಲಿ ಸಂಚಾರ ವ್ಯವಸ್ಥೆ ಈಗಾಗಲೇ ಅಸ್ತವ್ಯಸ್ತಗೊಂಡಿದೆ.

ರೈತರು ಈಗಾಗಲೇ ದೆಹಲಿ- ಮೀರಠ್ ಎಕ್ಸ್‌ಪ್ರೆಸ್ ಹೈವೇಯನ್ನು ಗಾಜಿಪುರ ಗಡಿ ಬಳಿ ತಡೆದಿದ್ದಾರೆ. ಪ್ರತಿಭಟನೆ ಕಾರಣದಿಂದ ಉತ್ತರಪ್ರದೇಶ ದಿಂದ ಗಾಜಿಪುರ ಕಡೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ದೆಹಲಿ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಈ‌ ನಡುವೆ ರೈತ ಮುಖಂಡ ಲಿಂಗಾವರಹಟ್ಟಿ ಲಕ್ಷ್ಮೀಕಾಂತ್ ನೇತೃತ್ವದ ರೈತ ಸಂಘ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಈರುಳ್ಳಿಯಿಂದ ಮಾಡಿರುವ ಹಾರ ಹಾಕಿ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈರುಳ್ಳಿ ದರ‌ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ದನಿಯಾಗುತ್ತಿಲ್ಲ ಎಂದು ಗುಡುಗಿದರು.

ಮೋದಿ‌ ಭಾವಚಿತ್ರಕ್ಕೆ ಈರುಳ್ಳಿ ಹಾರ

ಕಾಯ್ದೆ ಜಾರಿಗೆ ಬಂದು 10 ತಿಂಗಳು ಆದ ಸಂದರ್ಭದಲ್ಲಿ ಭಾರತ್ ಬಂದ್‌ಗೆ ಸಂಘಟನೆ ಕರೆ ನೀಡಿದೆ. ಕನಿಷ್ಠ ಬೆಂಬಲ ಬೆಲೆಗೆ ಸಂವಿಧಾನಾತ್ಮಕ ಖಾತರಿ ಒದಗಿಸಬೇಕು ಎನ್ನುವುದು ರೈತ ಸಂಘಟನೆಗಳ ಪ್ರಮುಖ ಹಕ್ಕೊತ್ತಾಯವಾಗಿದೆ. ಜತೆ

ಗೆ ಹೊಸ ಕಾನೂನು ಕೃಷಿ ವಲಯವನ್ನು ಖಾಸಗಿ ಸಂಸ್ಥೆಗಳ ಕೈವಶ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ ಎನ್ನುವುದು ರೈತರ ಅಹವಾಲು. ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಬಂದ್ ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

ಮುಂಜಾನೆ 6ರಿಂದ ಬಂದ್ ಆರಂಭವಾಗಿದ್ದು, ಸಂಜೆ 4ರವರೆಗೆ ನಡೆಯಲಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಘ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ದೇಶಾದ್ಯಂತ ಮುಚ್ಚಿರುತ್ತವೆ ಎಂದು ಎಸ್‌ಕೆಎಂ ಹೇಳಿದೆ. ವೈದ್ಯಕೀಯ ಸೇವೆ, ಔಷಧ ಅಂಗಡಿಗಳು, ಪರಿಹಾರ ಕಾರ್ಯಾಚರಣೆ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಶಾಲಾ-ಕಾಲೇಜುಗಳ ಚಟುವಟಿಕೆಗಳು, ಹೋಟೆಲ್‌ಗಳು ಕೂಡ ಎಂದಿನಂತೆ ನಡೆಯುತ್ತಿದೆ. ಬಂದ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ವಿವಿ ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಎಂದಿನಂತಿದ್ದು, ಜನರು ಕೂಡಾ ಎಂದಿನಂತೆ ಕೆಲಸಗಳಲ್ಲಿ ತೊಡಗಿದ್ದಾರೆ. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ತೆರೆದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ವಾತಾವರಣ ಕಂಡು ಬಂದಿಲ್ಲ.

ಇದನ್ನೂ ಓದಿ: ವಿಟ್ಲ: ಕೇಸರಿ ಶಾಲು ಧರಿಸಿದರೆ ಹುಷಾರ್; ಅಡ್ಯನಡ್ಕದಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು

- Advertisement -

Related news

error: Content is protected !!