Saturday, May 4, 2024
spot_imgspot_img
spot_imgspot_img

12 ಘಂಟೆ ಕಾಲ ಜಾಕೆಟ್ ಧರಿಸಿ ಸಮುದ್ರದ ಅಲೆಗಳೊಂದಿಗೆ ಹೋರಾಡಿ, ಈಜಿ ದಡಸೇರಿದ ಸಾಹಸಿ ಬಂಟ್ವಾಳದ ಸುಕುಮಾರ್; ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಇತ್ತೀಚೆಗೆ ಉತ್ತರ ಕರಾವಳಿಗೆ ಅಪ್ಪಳಿಸಿದ ತೌಕ್ತೇ ಚಂಡಮಾರುತ ಸಂಧರ್ಭದಲ್ಲಿ MRPL (Ongc) ಸಂಸ್ಥೆಯ ಬಾಂಬೆ ಸಮುದ್ರದ ಬಾರ್ಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನರಿಕೊಂಬು ಮಾರುತಿ ನಗರ ನಿವಾಸಿ ಕೃಷ್ಣಪ್ಪ ಮೂಲ್ಯರವರ ಪುತ್ರ ಸಾಹಸಿ, ಧೈರ್ಯಶಾಲಿ ಯುವಕ ಬಂಟ್ವಾಳದ ಸುಕುಮಾರ್ ಎಂಬಾತ ಸತತ 12 ಘಂಟೆ ಕಾಲ ಜಾಕೆಟ್ ಧರಿಸಿ ಸಮುದ್ರದ ಅಲೆಗಳೊಂದಿಗೆ ಹೋರಾಡಿ, ಈಜಿ ದಡಸೇರಿ ಪವಾಡ ಸದೃಶವಾಗಿ ಬದುಕುಳಿದಿದ್ದು, ಅವರಿಗೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಿಲ್ಲಾ ಹೋರಾಟ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ರೇಯಸ್ ವಾಮದಪದವು,

ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ, ಪ್ರಧಾನ ಕಾರ್ಯದರ್ಶಿ ಅರುಣ್ ಕುಲಾಲ್ ಸಜಿಪ, ತಾಲೂಕು ಹೋರಾಟ ಪ್ರಮುಖ್ ವಿಜೇಶ್ ನಾಯ್ಕ್.., ಕಾರ್ಯದರ್ಶಿ ಪ್ರಶಾಂತ್, ನಿಧಿ ಪ್ರಮುಖ ಕಿರಣ್ ರಾಜ್, ಹಿಂದೂ ಯುವವಾಣಿ ಸಂಯೋಜಕ ಗೌತಮ್, ಹಿಂದೂ ಜಾಗರಣ ವೇದಿಕೆ ನರಿಕೊಂಬು ಘಟಕ ಕಾರ್ಯದರ್ಶಿ ತಾರಾನಾಥ್, ಹಿಂದೂ ಜಾಗರಣ ವೇದಿಕೆ ಪೆರ್ನೆ ಘಟಕ ಸಂಪರ್ಕ ಪ್ರಮುಖ್ ದಿವಾಕರ ಕುಲಾಲ್, ಹಾಗೂ ಬಿಜೆಪಿಯ ಶರತ್ ಆಮೈ, ಚೇತನ್ ಎಲಬೆ, ಪುರುಷೋತ್ತಮ್ ಕೊಪ್ಪಳಕೊಡಿ, ಶಶಿಧರ್ ಮಾರುತಿ ನಗರ ಉಪಸ್ಥಿತರಿದ್ದರು.

- Advertisement -

Related news

error: Content is protected !!