Sunday, May 5, 2024
spot_imgspot_img
spot_imgspot_img

ನನ್ನ ಜೀವಮಾನದ ಕನಸು ನನಸಾಯಿತು. ‘ನಾನಿನ್ನು ನಾಯಿಯಂತೆ ಬದುಕಲಾರೆ’ ; ನಾಯಿವೇಷಕ್ಕಾಗಿ ಬರೋಬ್ಬರಿ 12 ಲಕ್ಷ ರೂ. ವ್ಯಯಿಸಿದ್ದ

- Advertisement -G L Acharya panikkar
- Advertisement -

ಜಪಾನ್​ನ ಟೋಕೋ ಎಂಬ ವ್ಯಕ್ತಿಗೆ ಪ್ರಾಣಿಗಳೆಂದರೆ ಪ್ರಾಣ. ಆತನಿಗೆ ಜನಸಂದಣಿಯಲ್ಲಿ ಪ್ರಾಣಿಯಂತೆ ತಿರುಗುವುದಕ್ಕೆ ಇಷ್ಟ. ಹೀಗಾಗಿಯೇ ಟೋಕೊ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದ. ಆದರೆ ಇದೀಗ ಈ ವ್ಯಕ್ತಿ ನನ್ನ ಜೀವಮಾನದ ಕನಸು ನನಸಾಯಿತು…’ನಾನಿನ್ನು ನಾಯಿಯಂತೆ ಬದುಕಲಾರೆ’ ಎಂದು ಹೇಳಿದ್ದಾನೆ.

ಒಂದು ವರ್ಷದಿಂದ ಸಾಮಾಜಿಕ ಜಾಲತಾಣಿಗರ ಪ್ರೀತಿ ಗಳಿಸಿದ್ದ ಜಪಾನಿನ ಟೋಕೊ ಎಂಬ ನಾಯಿ ವೇಷಧಾರಿ ಮನುಷ್ಯ ಇದೀಗ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. ಇನ್ನು ಮುಂದೆ ತಾನು ನಾಯಿ ವೇಷ ಧರಿಸಲಾರೆ. ತನ್ನ ಜೀವಮಾನದ ಈ ಕನಸನ್ನು ನನಸಾಗಿಸಲು ಈಡೇರಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾನೆ.

ರೂ. 12 ಲಕ್ಷ ಖರ್ಚು ಮಾಡಿ ನಾಯಿಯ ವೇಷವನ್ನು ಖರೀದಿಸಿದ್ದ ಈತ ವಾರಕ್ಕೊಮ್ಮೆ ಆ ವೇಷ ಧರಿಸಿ ನಾಯಿಯಂತೆ ರೂಪಾಂತರಗೊಂಡು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತಿದ್ದ. ಟೋಕೊ ಈತನಕ ತನ್ನ ನಿಜವಾದ ಹೆಸರನ್ನು ಬಹಿರಂಗಪಡಿಸಿಲ್ಲ. ಖಂಡಿತ ಟೋಕೋ ನಿಜವಾದ ನಾಯಿಯಂತೆಯೇ ಕಾಣುತ್ತದೆ, ಮನುಷ್ಯನೆಂದು ಹೇಳಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಪ್ರೋತ್ಸಾಹಿಸಿದ್ದರು. ಆದರೆ ಅಮೇರಿಕನ್ ಕೆನಲ್ ಕ್ಲಬ್ ನ್ಯಾಯಾಧೀಶರು ಟೋಕೊ ವಿಷಯವಾಗಿ ಟೀಕಿಸಿದ್ದು ಟೋಕೊ ವೇಷಧಾರಿ ಯುವಕನಿಗೆ ಬೇಸರ ಮೂಡಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಈತ ಇದೀಗ ತನಗೆ ಖುಷಿ ನೀಡುತ್ತಿದ್ದ ಹವ್ಯಾಸವನ್ನು ತೊರೆಯಲು ಸಿದ್ಧನಾಗಿದ್ದಾನೆ. ಒಂದು ವರ್ಷದಿಂದ ತನ್ನ ಈ ಆಸೆಯನ್ನು ಬೆಂಬಲಿಸಿದ ಝೆಪೆಟ್ಟೋ ಕಂಪೆನಿ, ಮಾಧ್ಯಮಗಳು, ಪೋಷಕರು ಮತ್ತು ಯೂಟ್ಯೂಬ್ ಫಾಲೋವರ್ಸ್​ಗೆ ಈ ಸಂದರ್ಭದಲ್ಲಿ ಈತ ಧನ್ಯವಾದ ಅರ್ಪಿಸಿದ್ದಾನೆ.

- Advertisement -

Related news

error: Content is protected !!