Tuesday, July 21, 2026
spot_imgspot_img
spot_imgspot_img

ಪ್ರವಾಸಿ ವೀಸಾದಲ್ಲಿ ಬಂದು ಧರ್ಮ ಪ್ರಚಾರ-ಮೂವರು ಅಮೆರಿಕನ್ ಪ್ರಜೆಗಳಿಗೆ ‘ಭಾರತದಿಂದ ತೊಲಗಿ’ ನೋಟಿಸ್‌

- Advertisement -
- Advertisement -

ಪುಣೆ, ಎ.29: ಧರ್ಮ ಪ್ರಚಾರದಲ್ಲಿ ತೊಡಗಿಕೊಂಡು ಪ್ರವಾಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಇಲ್ಲಿನ ಪೊಲೀಸರು ಮೂವರು ಅಮೆರಿಕನ್ ಪ್ರಜೆಗಳಿಗೆ ‘ಭಾರತದಿಂದ ತೊಲಗಿ’ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ಮೂವರು ಪುರುಷರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದರು. ಇತ್ತೀಚೆಗೆ ನಗರದ ಸದಾಶಿವಪೇಟ್ ಪ್ರದೇಶದಲ್ಲಿ ಧಾರ್ಮಿಕ ಕರಪತ್ರಗಳನ್ನು ಹಂಚುತ್ತಿರುವುದನ್ನು ಕಂಡ ಜಾಗ್ರತ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಎಲ್ಲ ಮೂವರು ಅಮೆರಿಕನ್ ಪ್ರಜೆಗಳಾಗಿದ್ದು, ಈ ಪೈಕಿ ಒಬ್ಬ ಹಿರಿಯ ನಾಗರಿಕನಾಗಿದ್ದರೆ, ಇತರ ಇಬ್ಬರು 45 ರಿಂದ 50 ವರ್ಷ ವಯಸ್ಸಿನವರು ಎಂದು ಡಿಸಿಪಿ ಸಂದೀಪ ಭಾಜಿಭಾಕರೆ ತಿಳಿಸಿದ್ದಾರೆ.

ಅವರು ವಿತರಿಸಿದ್ದ ಕರಪತ್ರಗಳು ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಇದ್ದು, ಅವುಗಳಲ್ಲಿನ ವಿಷಯ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದೆ. ಪರಿಶೀಲನೆಯ ಬಳಿಕ ಪ್ರವಾಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇ 10ರೊಳಗೆ ಭಾರತ ತೊರೆಯುವಂತೆ ನೋಟಿಸ್‌ ನೀಡಲಾಗಿದೆ.ಮುಂಬೈನಲ್ಲಿದ್ದ ಈ ಮೂವರು ವಾರದ ಹಿಂದೆ ಪುಣೆಗೆ ಆಗಮಿಸಿದ್ದರು ಎಂದು ತಿಳಿಸಿದ್ದಾರೆ. ಅವರು ಯಾವುದೇ ಸ್ಥಳೀಯ ಸಂಸ್ಥೆ ಅಥವಾ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದೂ ಹೇಳಿದರು.

- Advertisement -

Related news

error: Content is protected !!