Tuesday, April 23, 2024
spot_imgspot_img
spot_imgspot_img

15 ವರ್ಷದ ಬಾಲಕ ನಾಪತ್ತೆ ಪ್ರಕರಣ; ಪಕ್ಕದ್ಮನೆ ಆಂಟಿಯೂ ಮಿಸ್ಸಿಂಗ್‌..!

- Advertisement -G L Acharya panikkar
- Advertisement -

15 ವರ್ಷದ ಬಾಲಕ ನಾಪತ್ತೆಯಾದ ಘಟನೆ ನಡೆದಿದ್ದು ಪಕ್ಕದ ಮನೆಯ ವಿವಾಹಿತೆ, ಇಬ್ಬರು ಮಕ್ಕಳ ತಾಯಿಯೂ ನಾಪತ್ತೆ ಪ್ರಕರಣ ಮನೆಯವರನ್ನು ನಿದ್ದೆಗಡೆಸಿದೆ. ಆಂಧ್ರಪ್ರದೇಶದ ಗುಡಿವಾಡ ಪಟ್ಟಣದ ಗುಡ್‌ಮೆನ್ ಪೇಟ ಎಂಬ ಕಾಲೋನಿ ಈ ಘಟನೆ ನಡೆದಿದೆ. ಇತ್ತೀಚೆಗೆ 15 ವರ್ಷದ ಬಾಲಕ ನಾಪತ್ತೆಯಾಗಿದ್ದ. ಇದರಿಂದ ಪೋಷಕರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಇದರಿಂದ ಅಕ್ಕಪಕ್ಕದ ಮನೆಯವರ ಬಳಿ ವಿಚಾರಿಸಿದಾಗ ಮತ್ತೊಂದು ಅಘಾತಕಾರಿ ಸುದ್ದಿ ಪೋಷಕರ ಕಿವಿಗೆ ಬಿದ್ದಿದೆ,

ಬಾಲಕನ ಮನೆಯ ಎದುರು ವಾಸವಿದ್ದ 29 ವರ್ಷದ ವಿವಾಹಿತ ಯುವ ಮಹಿಳೆ, ಎರಡು ಮಕ್ಕಳ ತಾಯಿ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸಂಗತಿ ಬಹಿರಂಗವಾಗಿದೆ.. ಇದರಿಂದ ಬಾಲಕನ ಪೋಷಕರಲ್ಲಿ ಟೆನ್ಷನ್ ಶುರುವಾಗಿದೆ. ಆಕೆ ತಮ್ಮ ಹುಡುಗನನ್ನು ಕಿಡ್ನಾಪ್ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು ಹುಡುಗನನ್ನು ದೂರ ಮಾಡಿದ್ದರಿಂದ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸ ಒದಗಿಸಿದೆ.

ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಕರಣದ ನಿಗೂಢತೆಯನ್ನು ಭೇದಿಸಲು ಯತ್ನಿಸುತ್ತಿದ್ದಾರೆ. ಮದುವೆ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಟು ಟೌನ್ ಸಿಐ ದುರ್ಗಾರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇಲಾಗಿ ಬಾಲಕನ ಬಗ್ಗೆ ಮಾಹಿತಿ ತಿಳಿಸುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಬಾಲಕನ ಪೋಷಕರು ತಿಳಿಸಿದ್ದಾರೆ.

- Advertisement -

Related news

error: Content is protected !!