Thursday, April 25, 2024
spot_imgspot_img
spot_imgspot_img

ಕಲ್ಲಡ್ಕ: ಸ್ಟಾರ್ ನೆಟ್‌ವರ್ಕ್ ಸಂಸ್ಥೆ ಶುಭಾರಂಭ; ಹೈ ಸ್ಪೀಡ್ ಓಪ್ಟಿಕಲ್ ಫೈಬರ್ ಕೇಬಲ್ ಟಿವಿ ಇಂಟರ್‌ನೆಟ್ ಸೇವೆ

- Advertisement -G L Acharya panikkar
- Advertisement -

ಕಲ್ಲಡ್ಕ: ಆಧುನಿಕ ಯುಗದಲ್ಲಿ ಹೈ ಸ್ಪೀಡ್ ಇಂಟರ್‌ನೆಟ್ ಬೇಕೇ ಬೇಕು. ಇಲ್ಲೊಂದು ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಮುಂದಾಗಿದೆ. ಕಲ್ಲಡ್ಕದ ಹತ್ತು ಕಿ.ಮೀಟರ್ ಗೂ ಅಧಿಕ ವ್ಯಾಪ್ತಿಯಲ್ಲಿ ಹೈ ಸ್ಪೀಡ್ ಓಪ್ಟಿಕಲ್ ಫೈಬರ್ ಕೇಬಲ್ ಟಿವಿ ಇಂಟರ್‌ನೆಟ್ ಸೇವೆ ಒದಗಿಸಲು ಸ್ಟಾರ್ ನೆಟ್‌ವರ್ಕ್ ಕಲ್ಲಡ್ಕದಲ್ಲಿ ಶುಭಾರಂಭಗೊ0ಡಿದೆ. ಕೆ.ಆರ್ ಜಯಪ್ರಶಾಂತ್ ಇವರ ಮಾಲೀಕತ್ವದಲ್ಲಿ ಶ್ರೀರಾಮ ಕಾಂಪ್ಲೆಕ್ಸ್ನಲ್ಲಿ ಕಾರ್ಯಚರಿಸುತ್ತಿರುವ ಈ ಸಂಸ್ಥೆಯ ಶುಭಾರಂಭ ಕಾರ್ಯಕ್ರಮ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನೆರವೇರಿತು.

ಸಂಸ್ಥೆಯ ಕಛೇರಿಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಿದ್ರು, ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸರ್ವರ್ ಸಿಸ್ಟಂ ಅನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿಯೋನಿಕ್ಸ್ ಕರ್ನಾಟಕ ಇದರ ಸದಸ್ಯ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಅರವಿಂದ ಡಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿವೇಕಾನಂದ ಜಿ, ಸೂರ್ಯನಾರಾಯಣ, ಮೋಹನನಂದ ಸ್ವಾಮಿ, ಎಂ. ಎಸ್ ನಾಯಕ್ ಸೇರಿದಂತೆ ಮೊದಲಾದವರು ಆಗಮಿಸಿ ಶುಭಹಾರೈಸಿದ್ರು.

ಕಳೆದ 5 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯು ಇದೀಗಾ ಕಲ್ಲಡ್ಕ ಪರಿಸರದಲ್ಲಿ ಶ್ರೇಷ್ಟ ಗುಣಮಟ್ಟದ ಸೇವೆ ನೀಡಲು ಮುಂದಾಗಿದೆ ಎನ್ನುತ್ತಾರೆ ಸಂಸ್ಥೆಯ ಮಾಲೀಕ ಕೆ.ಆರ್ ಜಯಪ್ರಶಾಂತ್

ಇನ್ನು ಮುಂದೆ ಬಫರಿಂಗ್ ಅನ್ನುವ ಪದಕ್ಕೆ ನೀವು ಗುಡ್ ಬಾಯ್ ಹೇಳಲೇಬೇಕು. ತಮ್ಮ ನಗುಮೊಗದ ಹಾಗೂ ಹೈ ಸ್ಪೀಡ್ ಓಪ್ಟಿಕಲ್ ಫೈಬರ್ ಕೇಬಲ್ ಟಿವಿ ಇಂಟರ್ ನೆಟ್ ಸೇವೆಯನ್ನು ಈ ಸಂಸ್ಥೆ ನೀಡಲಿದೆ.

ಸ್ಟಾರ್ ನೆಟ್‌ವರ್ಕ್
ಶ್ರೀರಾಮ ಕಾಂಪ್ಲೆಕ್ಸ್ ಮುಖ್ಯ ರಸ್ತೆ ಕಲ್ಲಡ್ಕ
ದೂ.ಸಂ: 88672 42508 | 8296565508

- Advertisement -

Related news

error: Content is protected !!