Thursday, July 23, 2026
spot_imgspot_img
spot_imgspot_img

‘ನವೆಂಬರ್ 1ರಿಂದ ಚೀನಾಗೆ ಶೇ.155ರಷ್ಟು ಸುಂಕ’- ಡೊನಾಲ್ಡ್ ಟ್ರಂಪ್ ಎಚ್ಚರಿಕೆ

- Advertisement -
- Advertisement -

ವಾಷಿಂಗ್ಟನ್: ನವೆಂಬರ್ 1ರಿಂದ ಚೀನಾಗೆ ಶೇ.155ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್, ವ್ಯಾಪಾರ ಒಪ್ಪಂದಕ್ಕೆ ಬರದಿದ್ದರೆ ನವೆಂಬರ್ 1 ರಿಂದ ಚೀನಾದ ಸರಕುಗಳ ಮೇಲೆ ಅವರ ಆಡಳಿತವು ಶೇ. 155 ರಷ್ಟು ಸುಂಕ ವಿಧಿಸಲಾಗುತ್ತದೆ. ವ್ಯಾಪಾರ ಉದ್ವಿಗ್ನತೆಗಳ ಹೊರತಾಗಿಯೂ ಚೀನಾ, ಅಮೆರಿಕದೊಂದಿಗೆ ತುಂಬಾ ಗೌರವದಿಂದ ವರ್ತಿಸಿದೆ ಎಂದು ತಿಳಿಸಿದರು.

“ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ. ಹಲವು ದೇಶಗಳು ಈ ಹಿಂದೆ ಅಮೆರಿಕದ ಲಾಭ ಪಡೆದಿದ್ದರೂ, ಆ ದಿನಗಳು ಮುಗಿದುಹೋಗಿವೆ. ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಚೀನಾ ಶೇ. 55 ಮತ್ತು ಶೇ. 155 ರಷ್ಟು ಹಣವನ್ನು ನವೆಂಬರ್ 1 ರಿಂದ ಪಾವತಿಸಲಿದೆ” ಎಂದು ಹೇಳಿದರು.

“ನವೆಂಬರ್ 1 ರಿಂದ ಜಾರಿಗೆ ಬರುವಂತೆ ಚೀನಾದ ಸರಕುಗಳ ಮೇಲೆ ಅವರು ಪ್ರಸ್ತುತ ಪಾವತಿಸುತ್ತಿರುವ ಸುಂಕದ ಜೊತೆಗೆ 100 ಪ್ರತಿಶತ ಹೆಚ್ಚುವರಿ ಸುಂಕವನ್ನು ಪಾವತಿಸಬೇಕಾಗುತ್ತದೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದರು.

- Advertisement -

Related news

error: Content is protected !!