Friday, April 19, 2024
spot_imgspot_img
spot_imgspot_img

182 ನಾಣ್ಯ ನುಂಗಿದ ವೃದ್ಧ; ನಾಣ್ಯಗಳನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು

- Advertisement -G L Acharya panikkar
- Advertisement -

ವೃದ್ಧರೊಬ್ಬರ ಹೊಟ್ಟೆಯಿಂದ ವೈದ್ಯರ ತಂಡವು ಬರೋಬ್ಬರಿ 182 ನಾಣ್ಯಗಳನ್ನು ಹೊರಗೆ ತೆಗೆದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ದ್ಯಾಮಪ್ಪ ಹರಿಜನ ಎಂಬ 58 ವರ್ಷ ವಯಸ್ಸಿನ ವೃದ್ಧ ನಾಣ್ಯ ನುಂಗಿದ್ದರು. 5 ರೂ. ನ 56 ನಾಣ್ಯಗಳು, 2 ರೂ. ನ 51 ನಾಣ್ಯಗಳು ಮತ್ತು 1 ರೂ. ನ 80 ನಾಣ್ಯಗಳು ಹೀಗೆ ಒಟ್ಟು 187 ನಾಣ್ಯಗಳನ್ನು ದ್ಯಾಮಪ್ಪ ಹರಿಜನ ನುಂಗಿದ್ದರು. ಇವರು ನುಂಗಿದ್ದ ಒಟ್ಟು ನಾಣ್ಯಗಳ ತೂಕ ಒಂದೂವರೆ ಕಿ. ಲೋ. ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ದ್ಯಾಮಪ್ಪ ಹರಿಜನ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ನ್ಯಾಣ ನುಂಗಿದ ವಿಷಯ ತಿಳಿದ ಕುಟುಂಬದ ಸದಸ್ಯರು ಕುಮಾರೇಶ್ವರ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಹೊಟ್ಟೆಯ ಎಕ್ಸ್ – ರೇ ಮಾಡಿ ಪರೀಕ್ಷಿಸಿದಾಗ ನುಂಗಿದ್ದ ನಾಣ್ಯಗಳು ಕಂಡು ಬಂದವು. ರೋಗಿಯ ಜೀವಕ್ಕೆ ಅಪಾಯವಿರುವುದು ತಿಳಿದು ಬಂದಿತು. ನಂತರ ಎಂಡೊಸ್ಕೋಪಿ ಮಾಡಿ ನಾಣ್ಯಗಳನ್ನು ಹೊರ ತೆಗೆದು ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!