Thursday, August 6, 2026
spot_imgspot_img
spot_imgspot_img

2 ಲಕ್ಷ ರೂ. ಕವರೇಜ್​; ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

- Advertisement -
- Advertisement -

2015ರ ಬಜೆಟ್​​ನಲ್ಲಿ ಹಣಕಾಸು ಸಚಿವರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆ ಘೋಷಿಸಿದ್ದರು. ಅದೇ ವರ್ಷ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ಯೋಜನೆಗೆ ಚಾಲನೆ ನೀಡಿದರು.

ಪಿಎಂಜೆಜೆಬಿವೈ ಯೋಜನೆಯಡಿ 18ರಿಂದ 50 ವರ್ಷ ವಯಸ್ಸಿನವರು ಜೀವ ವಿಮೆ ಮಾಡಿಸಿಕೊಳ್ಳಬಹುದು. ವಾರ್ಷಿಕ 436 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದಕ್ಕೆ ಜಿಎಸ್​ಟಿಯಿಂದ ವಿನಾಯಿತಿ ಇದೆ.

ಪಿಎಂಜೆಜೆಬಿವೈ ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ ಮೇ 31ರಂದು 436 ರೂ. ವಿಮೆಗೆ ಪಾವತಿಯಾಗುತ್ತದೆ.

ಪಿಎಂಜೆಜೆಬಿವೈ ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ ಮೇ 31ರಂದು 436 ರೂ. ವಿಮೆಗೆ ಪಾವತಿಯಾಗುತ್ತದೆ.

ಎಲ್ಲ ಬ್ಯಾಂಕ್​ಗಳ ನೆಟ್​ ಬ್ಯಾಂಕಿಂಗ್ ವಿಭಾಗದಲ್ಲಿ ಈ ವಿಮೆ ಮಾಡಿಸಿಕೊಳ್ಳಲು ಅವಕಾಶವಿದೆ.

ವಿಮೆ ಮಾಡಿಸಿಕೊಂಡವರು ಮೃತಪಟ್ಟಲ್ಲಿ ಅವರು ನಾಮನಿರ್ದೇಶನ ಮಾಡಿರುವವರಿಗೆ (ನಾಮಿನಿ) 2 ಲಕ್ಷ ರೂ. ಪರಿಹಾರ ದೊರೆಯಲಿದೆ.

ವಿಮೆ ನೋಂದಣಿ ಮಾಡಿಕೊಂಡ 45 ದಿನಗಳ ಮೊದಲು ಅಪಘಾತ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಸಾವು ಸಂಭವಿಸಿದರೆ ಕವರೇಜ್ ದೊರೆಯುವುದಿಲ್ಲ. 45 ದಿನಗಳ ಬಳಿಕವಾದರೆ ಸಿಗುತ್ತದೆ.

- Advertisement -

Related news

error: Content is protected !!