Sunday, May 5, 2024
spot_imgspot_img
spot_imgspot_img

20ರ ಹರೆಯದ ಯುವಕನಿಗೆ ಆಂಟಿ ಜೊತೆ ಲವ್; ಗದ್ದೆಯಲ್ಲಿ ಇಬ್ಬರ ಶವಗಳೂ ಪತ್ತೆ..!!

- Advertisement -G L Acharya panikkar
- Advertisement -
vtv vitla

ಗಂಡನಿಂದ ದೂರವಾಗಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಯುವಕನ ಜೊತೆ ಬರ್ಬರವಾಗಿ ಕೊಲೆಯಾದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದವರನ್ನು ಆದಿಲಾಬಾದ್ ಪಟ್ಟಣದ ಭುಕ್ತಾಪುರದ ರೆಹಮಾನ್ (20) ಮತ್ತು ಕೆಆರ್‌ಕೆ ನಗರದ ಅಶ್ವಿನಿ (28) ಎಂದು ಗುರುತಿಸಲಾಗಿದೆ.

ಅಶ್ವಿನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಭಾವನಾತ್ಮಕ ಕಾರಣಗಳಿಂದ ಪತಿಯಿಂದ ಬೇರ್ಪಟ್ಟು ಕೆಲ ತಿಂಗಳಿಂದ ತವರು ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಆಕೆ ರೆಹಮಾನ್ ಎಂಬ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇವರಿಬ್ಬರೂ ಆದಿಲಾಬಾದ್‌ನಿಂದ ಸೀತಾಗಾಂವ್ಲಾದ ಉಪನಗರದಲ್ಲಿ ಬೆಳೆಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸಂಗ್ರಹಿಸಿದ್ದಾರೆ. ಸಮೀಪದ ಹೊಲದಲ್ಲಿ ಅವರಿಬ್ಬರನ್ನೂ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇಬ್ಬರಿಗೂ ತಲೆಯ ಮೇಲೆ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹತ್ಯೆಯಲ್ಲಿ ಅಶ್ವಿನಿ ಪತಿಯ ಕೈವಾಡ ಇದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!