- Advertisement -
- Advertisement -



ಕುಂದಾಪುರ: ಸೆ.7ರಂದು ಬೆಳಗ್ಗೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ ಘಟನೆ ಕುಂದಾಪುರ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬದಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕುಂದಾಪುರ ಮದ್ದುಗುಡ್ಡೆಯ ಅಣ್ಣಯ್ಯ ಖಾರ್ವಿ(62), ಖಾರ್ವಿ ಕೇರಿಯ ಸುರೇಶ ನಾಯ್ಕ(71), ಅಂಕದಕಟ್ಟೆಯ ದಯಾನಂದ(55), ಗುಲ್ವಾಡಿಯ ಉಬೇದುಲ್ಲಾ(50) ಎಂದು ಗುರುತಿಸಲಾಗಿದೆ.
ಇವರಿಂದ 3150ರೂ. ನಗದು, ನಾಲ್ಕು ಮೊಬೈಲ್ ಪೋನ್‌ಗಳು, ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








