Tuesday, September 1, 2026
spot_imgspot_img
spot_imgspot_img

200 ಅಡಿ ಉದ್ದದ ಪೈಪ್ ಲೈನ್​ನಲ್ಲಿ ಸಿಲುಕಿದ ರೈತ; ಅಗ್ನಿಶಾಮಕ ದಳದ ಸಾಹಸದಿಂದ ರೈತ ಬಚಾವ್

- Advertisement -
- Advertisement -

ರಾಮನಗರ: ಜಮೀನಿಗೆ ನೀರಿನ ಪೈಪ್ ಅಳವಡಿಸಬೇಕು ಎಂಬ ಗಡಿಬಿಡಿಯಲ್ಲಿದ್ದ ರೈತ 200 ಅಡಿ ಉದ್ದದ ಪೈಪ್ ಲೈನ್​ನ ಒಳಭಾಗಕ್ಕೆ ಸಿಲುಕಿದ ಘಟನೆ ರಾಮನಗರದ ಕೊಂಕಾಣಿದೊಡ್ಡಿ ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಸಿಂಗ್ರಿಭೋವಿದೊಡ್ಡಿ ಗ್ರಾಮದ ಗೊವೀಂದ ರಾಜು ಎಂಬ ರೈತ ತನ್ನ ಜಮೀನಿನಿಂದ ಮತ್ತೊಂದು ಭಾಗದ ಜಮೀನಿಗೆ ಬೋರ್​ವಲ್ ಮೂಲಕ ನೀರಿನ ಪೈಪ್ ಅಳವಡಿಸಲು ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಇದ್ದ ಸುಮಾರು 200 ಅಡಿ ಉದ್ದದ ಪೈಪ್ ಲೈನ್ ಒಳಭಾಗದಲ್ಲಿ ಪೈಪ್ ಎಳೆದುಕೊಂಡು ಹೋಗಿದ್ದಾರೆ. ಆದರೆ 170 ಅಡಿ ದೂರಕ್ಕೆ ಹೋದಾಗ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡಿದ್ದಾರೆ.

200 ಅಡಿ ಉದ್ದದ ಪೈಪ್ ಲೈನ್​ನಲ್ಲಿ ಸಿಲುಕಿದ ರೈತ ಜೊರಾಗಿ ಕೂಗಿದ್ದು, ಹೊರಭಾಗದಲ್ಲಿ ಇದ್ದ ಗೋವಿಂದ್​ ರಾಜು ಅವರ ಪುತ್ರ ವೇಣುಗೋಪಾಲ್​ಗೆ ಕೇಳಿಸಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳ್ಕಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಎರಡು ಜೆಸಿಬಿಗಳ ಮೂಲಕ 20 ಅಡಿ ಮಣ್ಣು ತೆಗೆದು, ಕೆಳಭಾಗದಲ್ಲಿ ಅವಳಡಿಸಿದ್ದ ಪೈಪ್​ಗಳನ್ನು ತೆಗೆದು ಒಳಭಾಗಕ್ಕೆ ಗಾಳಿಯನ್ನು ಕೊಟ್ಟು ಆನಂತರ ರೈತ ಗೋವಿಂದರಾಜು ಅವರನ್ನು ರಕ್ಷಣೆ ಮಾಡಿದ್ದಾರೆ. ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ರೈತ ಬದುಕುಳಿದಿದ್ದಾರೆ.

ಒಟ್ಟಾರೆ ನೀರಿನ ಪೈಪ್ ಅವಳಡಿಸಲು ಹೋಗಿದ್ದ ರೈತ, ಪೈಪ್ ಲೈನ್ ಒಳಭಾಗದಲ್ಲಿ ಸಿಲುಕಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸಾವಿನ ದವಡೆಯಿಂದ ರೈತ ಪಾರಾಗಿದ್ದಾರೆ.

- Advertisement -

Related news

error: Content is protected !!