Saturday, May 18, 2024
spot_imgspot_img
spot_imgspot_img

2020-21 ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿ ಘೋಷಣೆ; ನಿತಿನ್ ವಿಟ್ಲ, ಪ್ರಶಾಂತ್ ರೈ, ಅಶ್ವಲ್ ರೈ’ಗೆ ಕರ್ನಾಟಕದ ಮಹೋನ್ನತ ಏಕಲವ್ಯ ಪ್ರಶಸ್ತಿ

- Advertisement -G L Acharya panikkar
- Advertisement -

2020-21 ನೇ ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿಗಳ ನ್ನು ಘೋಷಣೆ ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 41 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರು ಆಯ್ಕೆಯಾಗಿದ್ದಾರೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಏಕಲವ್ಯ ಪ್ರಶಸ್ತಿ : ಅಥ್ಲೆಟಿಕ್ಸ್​ನಲ್ಲಿ ಜೀವನ್ ಕೆಎಸ್, ನೆಟ್ ಬಾಲ್ ನಿತಿನ್, ಬ್ಯಾಡ್ಮಿಂಟನ್ ಅಶ್ವಿನಿ ಭಟ್, ರೋಯಿಂಗ್ ಜಿ ತರುಣ್ ಕೃಷ್ಣಪ್ರಸಾದ್, ಬ್ಯಾಸ್ಕೆಟ್ ಬಾಲ್ ಲೋಪಮುದ್ರಾ ತಿಮ್ಮಯ್ಯ, ಈಜು ಲಿಖಿತ್ ಎಸ್​ಪಿ, ಕ್ರಿಕೆಟ್ ಕರುಣ್ ನಾಯರ್, ಟೇಬಲ್ ಟೆನ್ನಿಸ್ ಅನರ್ಘ್ಯ ಮಂಜುನಾಥ್, ಸೈಕ್ಲಿಂಗ್ ದಾನಮ್ಮ ಚಿಚಖಂಡಿ, ವಾಲಿಬಾಲ್ ಅಶ್ವಲ್ ರೈ, ಜುಡೋ ವಸುಂಧರಾ ಎಂ ಎನ್, ಹಾಕಿ ಪ್ರಧಾನ್ ಸೋಮಣ್ಣ, ಕಬಡ್ಡಿ ಪ್ರಶಾಂತ್ ಕುಮಾರ್ ರೈ, ಪ್ಯಾರಾ ಅಥ್ಲೆಟಿಕ್ಸ್ ರಾಧಾ ವಿ, ಖೋಖೋ ಮುನೀರ್ ಬಾಷಾ.

ನಿತಿನ್ ಪೂಜಾರಿ ವಿಟ್ಲ , ಅಶ್ವಲ್ ರೈ, ಪ್ರಶಾಂತ್ ರೈ

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ: ಆಟ್ಯಾ-ಪಾಟ್ಯಾ ಪೂಜಾಗಾಲಿ, ಬಾಲ್ ಬ್ಯಾಡ್ಮಿಂಟನ್ ಬಿಎನ್ ಕಿರಣ್ ಕುಮಾರ್, ಕಂಬಳ ಗೋಪಾಲ ನಾಯ್ಕ್, ಖೋಖೋ ದೀಕ್ಷಾ ಕೆ, ಗುಂಡುಕಲ್ಲು ಎತ್ತುವುದು ಶಿವಯೋಗಿ ಬಸಪ್ಪ ಬಾಗೇವಾಡಿ, ಕುಸ್ತಿ ಲಕ್ಷ್ಮೀ ಬಿರೆಡೆಕರ್, ಯೋಗ ಪಿ ಗೋಪಾಲಕೃಷ್ಣ, ಪವರ್ ಲಿಫ್ಟಿಂಗ್ ರಾಘವೇಂದ್ರ ಎಸ್ ಹೊಂಡದಕೇರಿ, ಸಂಗ್ರಾಣಿ ಕಲ್ಲು ಎತ್ತುವುದು ಸಿದ್ದಪ್ಪ ಪಾಂಡಪ್ಪ ಹೊಸಮನಿ, ಕುಸ್ತಿ ಸೂರಜ್ ಎಸ್ ಅಣ್ಣಿಕೇರಿ, ಪ್ಯಾರಾ ಈಜು ಶಶಾಂಕ್ ಬಿಎಂ, ಯೋಗ ಡಿ ನಾಗರಾಜು, ಜಿಮ್ನ್ಯಾಸ್ಟಿಕ್ ಶ್ರೀವರ್ಷಿಣಿ, ಜುಡೋ ಅವಿನಾಶ್ ನಾಯ್ಕ

ಕ್ರೀಡಾ ಪೋಷಕ ಪ್ರಶಸ್ತಿ: ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್ ಉಜಿರೆ, ಬೆಂಗಳೂರು ನಗರ ಜಿಲ್ಲೆಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಆರ್ ವಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಹೂಡಿ ಸ್ಪೋರ್ಟ್ಸ್ ಕ್ಲಬ್, ಧಾರವಾಡ ಜಿಲ್ಲೆಯ ಬಾಲ ಮಾರುತಿ ಸಂಸ್ಥೆ, ಬೆಂಗಳೂರು ನಗರ ಜಿಲ್ಲೆ ಎಮಿನೆಂಟ್ ಶೂಟಿಂಗ್ ಹಬ್, ದಕ್ಷಿಣ ಕನ್ನಡ ಜಿಲ್ಲೆಯ ಬಾಲಾಂಜನೇಯ ಜಿಮ್ನಾಶಿಯಂ (ರಿ.) ಮಂಗಳೂರು, ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಅಕ್ವಾಟಿಕ್ ಸೆಂಟರ್, ಬೆಂಗಳೂರು ನಗರ ಜಿಲ್ಲೆಯ ದ್ರಾವಿಡ್ ಪಡುಕೋಣೆ ಅಕಾಡೆಮಿ, ಮಂಡ್ಯ ಜಿಲ್ಲೆಯ ಪೀಪಲ್ ಎಜುಕೇಷನ್ ಟ್ರಸ್ಟ್ ಆಯ್ಕೆಯಾಗಿದೆ. ಜೀವಮಾನ ಸಾಧನಾ ಪ್ರಶಸ್ತಿಗೆ ಅಥ್ಲೆಟಿಕ್ಸ್​ನಲ್ಲಿ ಗಾವಂಕರ್ ಜಿವಿ, ಕಯಾಕಿಂಗ್ ಮತ್ತು ಕನೋಯಿಂನಲ್ಲಿ ಕ್ಯಾಪ್ಟನ್ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!