Sunday, June 14, 2026
spot_imgspot_img
spot_imgspot_img

ಕ್ಷಿತಿ ಹಾಡಿರುವ “ಶ್ರೀ ಸನ್ನಿದಾನ” ಹಾಡನ್ನು ಬಿಡುಗಡೆ ಮಾಡಿ ಶುಭ ನುಡಿದ ಪೂಜ್ಯ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು.

- Advertisement -
- Advertisement -

ಲಾಂಜಲಿ ಕ್ರಿಯೇಷನ್ಸ್ ಅರ್ಪಿಸುವ zee ಕನ್ನಡ ಸ ರೇ ಗ ಮ ಪ ಖ್ಯಾತಿ ಯ ಕ್ಷಿತಿ K ರೈ ಹಾಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ಭಕ್ತಿ ಗೀತೆ ಯ ವಿಡಿಯೋ ಆಲ್ಬಮ್ ಸಾಂಗ್ 29/11/2020 ನೇ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಪೂಜ್ಯರಾದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತ ದಲ್ಲಿ ಬಿಡುಗಡೆ ಗೊಂಡಿತು.


ಈ ಹಾಡಿನ ಸಾಹಿತ್ಯ ವನ್ನು ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಬರೆದಿದ್ದು, ಕಲಾಂಜಲಿ ಕ್ರಿಯೇಷನ್ಸ್ ನ ಜಗದೀಶ್ ಮಂಜೇಶ್ವರ ಇವರ ಸಲಹೆ ಸಹಕಾರ ದಿಂದ ಹಾಗೂ ರಾಜೇಶ್ ಭಂಡಾರಿ ಇವರ ಸಂಕಲನ ಹಾಗೂ ನಿರ್ದೇಶನ ದಲ್ಲಿ ಮೂಡಿ ಬಂದಿದೆ.

ಈ ಆಲ್ಬಮ್ ಹಾಡಿನ ಛಾಯ ಗ್ರಹಣ ವನ್ನು S J ಶಶಾಂಕ್ ಆಚಾರ್ಯ ಡಿಸೈನ್ ಸ್ಟುಡಿಯೋ ಮಂಗಳೂರು ಹಾಗೂ ಧರ್ಮಸ್ಥಳ ಬೆನಕ ಗ್ರಾಫಿಕ್ಸ್ ನ ಸತೀಶ್ ಇವರು ಮಾಡಿರುತ್ತಾರೆ.

https://www.facebook.com/nammatvchannel/videos/375440170355653


ಹಾಡಿನ ಬಿಡುಗಡೆ ಸಂದರ್ಭದಲ್ಲಿ ಕ್ಷಿತಿ ಕೆ ರೈ, ರಾಜೇಶ್ ಭಂಡಾರಿ, ಸ್ವಾತಿ ಸೂರಜ್ ನೆಲ್ಲಿತ್ತಾಯ, ಕಿಶೋರ್ ಶೆಟ್ಟಿ ಉಜಿರೆ, ಜಯಭಾರತಿ ಕೆ ರೈ, ಕಿಶೋರ್ ರೈ, ಸತೀಶ್, ಪ್ರಭಾಕರ್, ಶಿವಪ್ರಕಾಶ್ ಹೆಗ್ಡೆ, ಬಾಬು ಹಾಸನ, ರಾಜೇಂದ್ರ ದಾಸ್, ಹಾಗೂ ವೀರು ಶೆಟ್ಟಿ ಯವರು ಉಪಸ್ಥಿತ ರಿದ್ದರು.

- Advertisement -

Related news

error: Content is protected !!