Sunday, September 27, 2026
spot_imgspot_img
spot_imgspot_img

UPIಗೆ ಎಂಡಿಆರ್ ಶುಲ್ಕ ವಿರೋಧಿಸಿ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳಿಂದ ಅ.2ರಂದು ಪ್ರತಿಭಟನೆ

- Advertisement -
- Advertisement -

ಹೊಸದಿಲ್ಲಿ: 2,000 ರೂ.ಗಿಂತ ಹೆಚ್ಚಿನ ನಿರ್ದಿಷ್ಟ ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಪ್ರಸ್ತಾವಿತ ಶೇ.0.4 ರಷ್ಟು ಮರ್ಚೆಂಟ್ ಡಿಸೌಂಟ್ ರೇಟ್ (ಎಂಡಿಆರ್) ಅನ್ನು ವಿರೋಧಿಸಿ ದೇಶಾದ್ಯಂತದ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ಅಕ್ಟೋಬರ್ 2 ಅನ್ನು ‘ನೋ ಯುಪಿಐ ಡೇ’ ಎಂದು ಆಚರಿಸಲು ಯೋಜಿಸಿದ್ದಾರೆ.ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್‌ ಅಸೋಸಿಯೇಷನ್ (ಎಐಎಂಆರ್‌ಎ) ಪ್ರತಿಭಟನೆಗೆ ಕರೆ ನೀಡಿದ್ದು, ಗಾಂಧಿ ಜಯಂತಿಯಂದು ಚಿಲ್ಲರೆ ವ್ಯಾಪಾರಿಗಳು ತಮ್ಮ ಯುಪಿಐ ಕ್ಯೂಆ‌ರ್ ಕೋಡ್‌ಗಳನ್ನು ಕಪ್ಪುಬಟ್ಟೆಯಿಂದ ಸಾಂಕೇತಿಕವಾಗಿ ಮುಚ್ಚಲಿದ್ದಾರೆ ಮತ್ತು ಯುಪಿಐ ಪಾವತಿಗಳನ್ನು ಸ್ವೀಕರಿಸುವುದರಿಂದ ದೂರವುಳಿಯಲಿದ್ದಾರೆ ಎಂದು ತಿಳಿಸಿದೆ.

ಎಂಡಿಆ‌ರ್ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳ ಮೇಲೆ ಹೇರಬಹುದಾದ ಹೆಚ್ಚುವರಿ ವೆಚ್ಚದ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸುವುದು ಪ್ರತಿಭಟನೆಯ ಗುರಿಯಾಗಿದೆ ಎಂದು ಎಐಎಂಆರ್‌ಎ ಉಪಾಧ್ಯಕ್ಷ ಮತ್ತು ದಿಲ್ಲಿ ಎನ್‌ಸಿಆ‌ರ್ ಅಧ್ಯಕ್ಷ ತರ್ವಿಂದ‌ರ್ ಸಿಂಗ್‌ ಹೇಳಿದರು.ಶೇ.0.4ರಷ್ಟು ಎಂಡಿಆರ್ ನಿಂದಾಗಿ ಪ್ರತಿ ತಿಂಗಳು ಯುಪಿಐ ಮೂಲಕ 5 ಲಕ್ಷ ರೂ.ಗಳಿಂದ 30 ಲಕ್ಷ ರೂ.ವರೆಗೆ ವ್ಯವಹಾರ ನಡೆಸುವ ಸಣ್ಣ ಚಿಲ್ಲರೆ ವ್ಯಾಪಾರಿಗೆ ತಿಂಗಳಿಗೆ 2,000 ರೂ.ಗಳಿಂದ 12,000 ರೂ.ವರೆಗೆ ನಿವ್ವಳ ನಷ್ಟ ಉಂಟಾಗಬಹುದು ಎಂದು ಎಐಎಂಆರ್‌ಎ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.ಈ ಶುಲ್ಕವು ದೇಶಾದ್ಯಂತದ ಸಣ್ಣ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಮೇಲೆ ತಿಂಗಳಿಗೆ ಸುಮಾರು 40 ಕೋಟಿ ರೂ.ಮತ್ತು ವರ್ಷಕ್ಕೆ ಸುಮಾರು 500 ಕೋಟಿ ರೂ.ಗಳಷ್ಟು ಆರ್ಥಿಕ ಹೊರೆಯನ್ನು ಹೇರಬಹುದು ಎಂದು ಎಐಎಂಆರ್‌ಎ ಅಂದಾಜಿಸಿದೆ.

ಪ್ರತಿಭಟನೆಯು ಯುಪಿಐ ಅಥವಾ ಡಿಜಿಟಲ್ ಪಾವತಿಗಳ ವಿರುದ್ಧವಲ್ಲ, ಬದಲಿಗೆ ವ್ಯಾಪಾರಿಗಳ ಮೇಲಿನ ಹೆಚ್ಚುವರಿ ವೆಚ್ಚದ ವಿರುದ್ಧವಾಗಿದೆ ಎಂದು ಸಿಂಗ್ ಸ್ಪಷ್ಟಪಡಿಸಿದರು.ಎಂಡಿಆರ್ ಶುಲ್ಕ ಅ.15ರಿಂದ ಜಾರಿಗೊಳ್ಳಲಿದೆ.

- Advertisement -

Related news

error: Content is protected !!