Sunday, October 6, 2024
spot_imgspot_img
spot_imgspot_img

ಉಪ್ಪಳ ಪತ್ವಾಡಿ ಮನೆಯಲ್ಲಿ 3.5 ಕೋಟಿ ರೂ. ಬೆಲೆಯ ಗಾಂಜಾ ವಶ ; ಮಂಗಳೂರು, ಮಣಿಪಾಲ, ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಸಪ್ಲೈ ; ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲು

- Advertisement -
- Advertisement -

ಕಾಸರಗೋಡು : ಉಪ್ಪಳದ ಮನೆಯೊಂದಕ್ಕೆ ದಾಳಿ ನಡೆಸಿದ ಡಿವೈಎಸ್ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ಸುಮಾರು 3.5 ಕೋಟಿ ರೂ. ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಉಪ್ಪಳ ಪತ್ವಾಡಿ ಕೊಂಡೆವೂರು ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು ವಶಪಡಿಸಿಕೊಳ್ಳ ಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯ ಮಾಲೀಕ ಅಸ್ಕರ್ ಅಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ. 30 ರಂದು ಮೇಲ್ಪರಂಬದಲ್ಲಿ ಎಂಡಿಎಂಎ ಸಹಿತ ಅಬ್ದುಲ್ ರಹೀಂ ಎಂಬಾತನು ರವಿ ಎನ್ನುವ ಹೆಸರಿನಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ಮಾಡುತ್ತಿದ್ದಾಗ ಬಂಧಿಸಲಾಗಿತ್ತು. ಈತನನ್ನು ವಿಚಾರಣೆಗೊಳಪಡಿಸಿದಾಗ ಮಂಗಳೂರು, ಮಣಿಪಾಲ, ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಸಪ್ಲೈ ಮಾಡುವುದಾಗಿ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಲಭಿಸಿದ ಖಚಿತ ಮಾಹಿತಿಯಂತೆ ಉಪ್ಪಳದ ಮನೆಗೆ ದಾಳಿ ನಡೆಸಲಾಗಿದೆ.

ಕಾರ್ಡ್ ಬೋರ್ಡ್ ಪೆಟ್ಟಿಗೆಯಲ್ಲಿರಿಸಲಾಗಿದ್ದ ಸುಮಾರು 3.5 ಕೋಟಿ ರೂ. ಬೆಲೆಯ ಮೂರು ಕಿಲೋ ಎಂಡಿಎಂಎ ಹಾಗೂ ಒಂದು ಕಿಲೋ ಗಾಂಜಾ ವನ್ನು ವಶಪಡಿಸಿ ಕೊಳ್ಳಲಾಗಿದೆ. ಇದಲ್ಲದೆ ಹಲವಾರು ಮಾದಕ ದ್ರವ್ಯ ಹಾಗೂ ಮಾತ್ರೆಯನ್ನು ವಶಪಸಿಕೊಳ್ಳಲಾಗಿದೆ, ಹಲವು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿ ಮಾದಕ ವಸ್ತು ವಹಿವಾಟು ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

- Advertisement -

Related news

error: Content is protected !!