- Advertisement -
- Advertisement -

ವರ್ಷಂಪ್ರತಿ ಸಂಭ್ರಮದಿಂದ ನಡೆದು ಬರುತ್ತಿದ್ದ ಪುತ್ತೂರಿನ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಗೆ ಈ ಬಾರಿ ತಡೆ ಉಂಟಾಗಿದೆ.ಸೆಪ್ಟೆಂಬರ್ 17 (ಇಂದು) ಸಂಜೆ ಆರಂಭವಾದ ಶೋಭಾಯತ್ರೆಯಲ್ಲಿ ಹಲವು ಟ್ಯಾಬ್ಲೊಗಳು ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸುತ್ತಾ ಸಾಗುತ್ತಿದ್ದವು. ಜೊತೆಗೆ ಸಹಸ್ರ ಸಂಖ್ಯೆಯಲ್ಲಿ ಭಕ್ತರೂ ಮೆರವಣಿಗೆಯಲ್ಲಿದ್ದರು.
ಆದರೆ ಶೋಭಾಯಾತ್ರೆಯು ಪುತ್ತೂರು ಬಸ್ ನಿಲ್ದಾಣದ ಬಳಿ ತಲುಪಿದಾಗ ಸಮಯ ರಾತ್ರಿ 10 ಗಂಟೆ ಮೀರಿದ್ದರಿಂದ ಪೊಲೀಸರು ತಡೆಯೊಡ್ಡಿದರು. ಜೊತೆಗೆ ಟ್ಯಾಬ್ಲೊಗಳು ವಾಪಸ್ ಹೋಗುವಂತೆ ಸೂಚಿಸಲಾಯಿತು.ಇದರಿಂದ ಪೊಲೀಸರು ಮತ್ತು ಆಯೋಜಕರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಈ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಗೆ ಅಡ್ಡಿ ಮಾಡಿದರೆ ಮುಂದೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದೇ ಕಷ್ಟ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಈ ಶೋಭಾಯಾತ್ರೆಯನ್ನು ಸಂಘಟಕರು ಮಾಡಿದ್ದರು. ಸರ್ಕಾರದ ಇಂತಹ ಕ್ರಮಗಳು ಖಂಡನೀಯ ಎಂದರು.
- Advertisement -








