Wednesday, November 18, 2026
spot_imgspot_img
spot_imgspot_img

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಉಡುಪಿಯ ವ್ಯಕ್ತಿಗೆ ₹15.98 ಲಕ್ಷ ವಂಚನೆ: ಸಿಬಿಐ ಅಧಿಕಾರಿಗಳೆಂದು ನಂಬಿಸಿ ಹಣ ಲೂಟಿ!

- Advertisement -
- Advertisement -

ಉಡುಪಿ: ಸಿಬಿಐ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಡಿಜಿಟಲ್ ಆರೆಸ್ಟ್ ಮಾಡಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಷಾಚಲ (51) ಎಂಬವರಿಗೆ ದಿಲ್ಲಿ ಸಿಬಿಐ ಪೊಲೀಸ್ ಎಂದು ಹೇಳಿಕೊಂಡು ಅ.18ರಂದು ಕರೆ ಮಾಡಿದ್ದು ‘ನಿಮ್ಮ ಹೆಸರಿನಲ್ಲಿ ದಿಲ್ಲಿಯಲ್ಲಿ ಐಸಿಐಸಿಐ ಬ್ಯಾಂಕ್ ಪಾಸ್‌ಬುಕ್ ಸಿಕ್ಕಿದ್ದು ಇದು ಪಂಕಜ್ ಶರ್ಮಾ ಎಂಬ ವ್ಯಕ್ತಿಯ ಹೆಸರಿನ ಮನಿ ಲಾಂಡರಿಂಗ್, ಡ್ರಗ್ಸ್ ಹಾಗೂ ಚೈಲ್ಡ್ ಕಿಡ್ನಾಪಿಂಗ್ ಕೇಸ್‌ನಲ್ಲಿ ಇರುತ್ತದೆ. ನಿಮ್ಮನ್ನು ಈಗಲೇ ಅರೆಸ್ಟ್ ಮಾಡಲು ಕೋರ್ಟ್‌ನಿಂದ ಆದೇಶ ಆಗಿದೆ.

ನೀವು ತಕ್ಷಣ ದೆಹಲಿಗೆ ಬರಬೇಕು. ಇಲ್ಲವಾದಲ್ಲಿ ವೀಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಬೇಕು’ ಎಂದು ತಿಳಿಸಿದನು.ನಂತರ ಪೊಲೀಸ್‌ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಶೇಷಾಚಲ ಅವರ ಪತ್ನಿಯ ಮೊಬೈಲ್ ಸಂಖ್ಯೆಗೆ ವೀಡಿಯೋ ಕರೆ ಮಾಡಿ, ನಾನು ಡೆಲ್ಲಿ ಪೊಲೀಸ್, ನಿಮ್ಮ ಕೇಸ್‌ನ ತನಿಖಾಧಿಕಾರಿ ಎಂದು ಹೇಳಿದನು. ‘ನೀವು ಏನೇ ಮಾಡುತ್ತಿದ್ದರು ಪ್ರತಿ ಗಂಟೆಗೊಮ್ಮೆ ನಮಗೆ ಮೇಸೇಜ್ ಹಾಕಬೇಕು. ಈ ವಿಚಾರವನ್ನು ಯಾರಿಗೂ ಹೇಳಿದಲ್ಲಿ ನಿಮಗೆ ರಿಸ್ಕ್ ಆಗುತ್ತದೆ ಎಂದು ಹೆದರಿಸಿದ್ದನು.ಹೀಗೆ ಆರೋಪಿಗಳು ಪ್ರತಿ ದಿನ ವಿಡೀಯೋ ಕರೆ ಮಾಡಿ ಕೋರ್ಟ್‌ನಿಂದ ಜಡ್ಜ್ ಸಿಬಿಐ ಆಫೀಸರ್ ಹಾಗೂ ಆರ್‌ಬಿಐ ಅವರು ಬಂದು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿ, ಶೇಷಾಚಲ ಅವರ ಬಳಿ ಇರುವ ಹಣ, ಚಿನ್ನ, ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡಕೊಂಡು, ಎಲ್ಲಾ ಹಣವನ್ನು ಆರೋಪಿಗಳು ನೀಡಿದ ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆ ತಿಳಿಸಿದರು.

ಅದರಂತೆ ಶೇಷಾಚಲ ಅ.31ರಂದು 11,00,000ರೂ. ಹಣವನ್ನು ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದರು. ನಂತರ ನ.5ರಂದು ಅಪರಿಚಿತರು ತಿಳಿಸಿದ ಇನ್ನೊಂದು ಖಾತೆಗೆ 4,98,976ರೂ. ಹಣ ಜಮಾ ಮಾಡಿದ್ದರು.

ಹೀಗೆ ಆರೋಪಿಗಳು ಪೊಲೀಸ್ ಅಧಿಕಾರಿ ಗಳೆಂದು ನಂಬಿಸಿ, ಬಂಧಿಸುವುದಾಗಿ ಹೆದರಿಸಿ ಖಾತೆಯಿಂದ ಒಟ್ಟು 15,98,976ರೂ. ಹಣವನ್ನು ವರ್ಗಾವಣೆ ಮಾಡಿಸಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!