Friday, July 24, 2026
spot_imgspot_img
spot_imgspot_img

4 ದಿನದ ಮಗುವನ್ನು ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲು ಝಿರೋ ಟ್ರಾಫಿಕ್

- Advertisement -
- Advertisement -

ಬೆಂಗಳೂರು: ಹೃದಯ ಸಂಬಂಧಿ ಚಿಕಿತ್ಸೆಗಾಗಿ ಹಾಸನದಿಂದ 4 ದಿನದ ಗಂಡು ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿದೆ.

ಹಾಸನದ ವೈದ್ಯಕೀಯ ಆಸ್ಪತ್ರೆಯಿಂದ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ನಾಲ್ಕು ದಿನದ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ವೈದ್ಯರು, ನರ್ಸ್, ಮಗು ಇರುವ ಆಂಬ್ಯುಲೆನ್ಸ್ ಅನ್ನು ಹಾಸನ ಮೂಲದ ಮಧುಸೂದನ್ ಚಾಲನೆ ಮಾಡುತ್ತಿದ್ದಾರೆ.

ಮಗು ಇರುವ ಆಂಬ್ಯುಲೆನ್ಸ್‌ ಹಾಸನದಿಂದ ಹೊರಟಿದ್ದು, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಹೃದಯ ಸಂಬಂಧಿ ಕಾಯಿಲೆಯಿಂದ 4 ದಿನದ ಗಂಡು ಮಗು ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.

ಮಂಡ್ಯ ಜಿಲ್ಲೆ ಕಿಕ್ಕೇರಿ ಮೂಲದ ಶ್ವೇತಾ ಮತ್ತು ತ್ರಿವೇದಿ ದಂಪತಿಗಳ ಮಗುವಿಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

vtv vitla
- Advertisement -

Related news

error: Content is protected !!