Monday, April 29, 2024
spot_imgspot_img
spot_imgspot_img

ಬೆಂಗಳೂರು ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್! ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಏನಂತಾರೆ?

- Advertisement -G L Acharya panikkar
- Advertisement -

ನವದೆಹಲಿ: ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಜೂನ್.18ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯು ನಡೆಯಲಿದೆ.ಈ ಹಿನ್ನೆಲೆಯಲ್ಲಿ ದೆಹಲಿಯಿಂದ ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಆಗಮಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಆಗಮಿಸಿದಂತ ಅರುಣ್ ಸಿಂಗ್ ಅವರಿಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ರಾಜ್ಯದಲ್ಲಿ ಸಿಎಂ ಬದಲಾವಣೆಯದ್ದೇ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಿಎಂ ಯಡಿಯೂರಪ್ಪ ಬದಲಾವಣೆ ಆಗ್ತಾರಾ ಎನ್ನುವ ಬಗ್ಗೆ ಅನೇಕ ಸಚಿವರು, ಶಾಸಕರು ಮಾತ್ರ ಸಾಧ್ಯವೇ ಇಲ್ಲ. ಮುಂದಿನ 2 ವರ್ಷಗಳು ಯಡಿಯೂರಪ್ಪ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎನ್ನುತ್ತಿದ್ದಾರೆ.

ಆದರೆ ಸ್ವತಃ ಯಡಿಯೂರಪ್ಪನವರು ಮಾತ್ರ, ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಹೈಕಮಾಂಡ್ ಸೂಚಿಸಿದ ಕೂಡಲೇ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎನ್ನುವ ಹೇಳಿಕೆ ನೀಡಿ, ಸಿಎಂ ಬದಲಾವಣೆಯ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದ್ದರು. ಆ ನಂತರ ಮುಂದಿನ 2 ವರ್ಷ ಈ ರಾಜ್ಯದ ಮುಖ್ಯಮಂತ್ರಿ ತಾವೇ ಎಂದು ಆ ಬೆಂಕಿಗೆ ಕೊಂಚ ನೀರೆರೆದು ಉರಿ ಕಡಿಮೆ ಮಾಡಿದ್ದರು.

ಜೂನ್.18ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇನ್ನೂ ತೀವ್ರ ಕುತೂಹಲ ಕೆರಳಿಸಿದ್ದಂತ ಮುಖ್ಯಮಂತ್ರಿ ಬದಲಾವಣೆ ಕುರಿತಂತ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೀಗ ಆಗಮಿಸಿದ್ದೇನೆ. ಎರಡು ದಿನ ರಾಜ್ಯದಲ್ಲಿಯೇ ಇರಲಿದ್ದೇನೆ. ರಾಜ್ಯ ರಾಜಕೀಯ ಬೆಳವಣಿಗೆ ಕುರಿತಂತೆ ಸದ್ಯಕ್ಕೆ ಈ ಕೂಡಲೇ ಯಾವುದೇ ಪ್ರತಿಕ್ರಿಯಿಸೋದಿಲ್ಲ ಎಂಬುದಾಗಿ ತಿಳಿಸುವ ಮೂಲಕ, ವಿಮಾನ ನಿಲ್ದಾಣದಿಂದ ಕೆಕೆ ಗೆಸ್ಟ್ ಹೌಸ್ ಗೆ ತೆರಳಿದರು.

- Advertisement -

Related news

error: Content is protected !!