Thursday, May 2, 2024
spot_imgspot_img
spot_imgspot_img

45 ವರ್ಷದ ವ್ಯಕ್ತಿಯ ಜೊತೆ ಬಾಲಕಿಯ ಮದುವೆ..! ಬಾಲಕಿಯ ತಂದೆ ತಾಯಿಯೂ ಸೇರಿ ಮದುವೆಯಾದ ವ್ಯಕ್ತಿಯೂ ಅಂದರ್‌..!

- Advertisement -G L Acharya panikkar
- Advertisement -

45 ವರ್ಷದ ವ್ಯಕ್ತಿಯೋರ್ವ 14 ವರ್ಷದ ಬಾಲಕಿಯನ್ನು ಮದುವೆಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಈ ಸಂಬಂಧ 45 ವರ್ಷದ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್ (45) ಬಂಧಿತ ಆರೋಪಿ.

ಈತನಿಗೆ ಈಗಾಗಲೇ ಮದ್ವೆಯಾಗಿ, 17 ವರ್ಷದ ಮಗ ಕೂಡ ಇದ್ದಾನೆ. ಆದರೂ ಬಡ ದಂಪತಿಯೊಬ್ಬರಿಗೆ ಹಣದಾಸೆ ತೋರಿಸಿ, ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಬಲವಂತವಾಗಿ ವರಿಸಿದ್ದಾನೆ.

ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದ ಗುರುಪ್ರಸಾದ್​, ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ. ಬಾಲಕಿಯ ಪೋಷಕರಿಗೆ ಹಣದಾಸೆ ತೋರಿಸಿ, ಸೆ.7ರಂದು ಬೆಂಗಳೂರು ಹೊರ ವಲಯಕ್ಕೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗಿದ್ದ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದ ಎನ್ನಲಾಗಿದೆ.

ಈ ಬಗ್ಗೆ ಪರಿಚಯಸ್ಥರ ಬಳಿ ಬಾಲಕಿ ನೋವು ತೋಡಿಕೊಂಡು ಕಣ್ಣೀರಿಟ್ಟದ್ದಳು. ಆಕೆಯ ಕಷ್ಟಕ್ಕೆ ಮರುಗಿದ ಪರಿಚಯಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗುರುಪ್ರಸಾದ್​ ಮತ್ತು ಬಾಲಕಿಯ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.

astr
- Advertisement -

Related news

error: Content is protected !!