Wednesday, November 4, 2026
spot_imgspot_img
spot_imgspot_img

ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಪಾತ್ರದ ಬಗ್ಗೆ ಅನುಮಾನ; ಮಂಪರು ಪರೀಕ್ಷೆಗೆ ಉಗ್ರಪ್ಪ ಆಗ್ರಹ

- Advertisement -
- Advertisement -

ಬೆಂಗಳೂರು : ಸ್ಟಿಂಗ್‌ ಪ್ರಕರಣ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದ್ದಾರೆ.ಮಂಗಳವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಸಲ್ಲದ ಆರೋಪಗಳಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದೆ.ಅದರಲ್ಲೂ ಕುಮಾರಸ್ವಾಮಿ ಅವರು ಇಂದಿನ ಕಾಲಘಟ್ಟದಲ್ಲೂ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ.

ಅವರು ಕೇಂದ್ರ ಸಚಿವ ಅಥವಾ ಸ್ಟಿಂಗ್ ಆಪರೇಷನ್ ತನಿಖಾಧಿಕಾರಿ ಎನ್ನುವ ಅನುಮಾನ ಹುಟ್ಟುಹಾಕಿದೆ.ಹೀಗಾಗಿ, ಅವರನ್ನು ಒಮ್ಮೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.ಸಿದ್ದರಾಮಯ್ಯ ದಾಖಲೆಯ ಕಾಲ ಮುಖ್ಯಮಂತ್ರಿ ಆಗಿ ಈ ರಾಜ್ಯಕ್ಕೆ ಸೇವೆ ಸಲ್ಲಿಕೆ ಮಾಡಿದ್ದಾರೆ. ಇದೇ ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರಗೆ ಹಾಕಿದ್ದರು. ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ ಅಸೂಯೆ ಮಾಡಿಕೊಂಡು ಬಂದಿದ್ದರು.

ಈಗ ಸಿದ್ದರಾಮಯ್ಯ ಮೇಲೆ ಪ್ರೇಮ ಶುರುವಾಗಿದೆ. ಒಂದೆ ಕಲ್ಲಿಗೆ ಹೊಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.ಸ್ಟಿಂಗ್ ಪ್ರಕರಣ ವಿಚಾರದಲ್ಲಿ ಪ್ರತಿ ದಿನ ಒಬ್ಬರ ಮೇಲೆ ಆರೋಪ ಮಾಡಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯದ ಘನತೆಯನ್ನು ಬಿಜೆಪಿ-ಜೆಡಿಎಸ್ ಹಾನಿ ಮಾಡುತ್ತಿವೆ. ಕೇಂದ್ರ ಸಚಿವರು ಆದವರು ದೇಶದ ಎಲ್ಲೆಡೆ ಹೋಗಿ ಕೆಲಸ ಮಾಡಬೇಕು.

ನಾಡಿಗೆ ಹೆಸರು ಬರುವಂತೆ ನಡೆದುಕೊಳ್ಳಬೇಕು. ಆದರೆ, ಬರೀ ಕರ್ನಾಟಕದಲ್ಲಿದ್ದು ಆರೋಪ ಮಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳಿದರೆ ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬಂತೆ ಇದೆ. ಸಿದ್ದರಾಮಯ್ಯ ಅವರ ಮೇಲೆ ಈಗ ಏಕಾಏಕಿ ಪ್ರೀತಿ ಬಂದಿದೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕಾಗಿದೆ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ಆರ್.ರಮೇಶ್ ಸೇರಿದಂತೆ ಪ್ರಮುಖರಿದ್ದರು.

- Advertisement -

Related news

error: Content is protected !!