Sunday, August 23, 2026
spot_imgspot_img
spot_imgspot_img

ವಿಟ್ಲ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಕೌಟ್ಸ್‌–ಗೈಡ್ಸ್‌ ದೇಶಭಕ್ತಿ, ಜನಪದ ಗೀತೆ ಗಾಯನ ಸ್ಪರ್ಧೆ

- Advertisement -
- Advertisement -

ವಿಟ್ಲ: ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವಿಟ್ಲ ಸ್ಥಳೀಯ ಸಂಸ್ಥೆಯ ವತಿಯಿಂದ ದೇಶಭಕ್ತಿ ಗೀತೆ ಹಾಗೂ ಜನಪದ ಗೀತೆ ಗಾಯನ ಸ್ಪರ್ಧೆ ಆ.22ರಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಸವನಗುಡಿ ವಿಟ್ಲದಲ್ಲಿ ನಡೆಯಿತು. ಜೆಸಿಐ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುದರ್ಶನ ಪಡಿಯರ್ ವಹಿಸಿದ್ದರು.

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಉಪಾಧ್ಯಕ್ಷ ಜಯರಾಮ್ ಬಳ್ಳಾಲ್ ಉಪಸ್ಥಿತರಿದ್ದರು.ಪ್ರತೀಪ್ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಜತೆ ಕಾರ್ಯದರ್ಶಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರತಿನಿಧಿ ನಾರಾಯಣ ನಾಯಕ್ ವಂದಿಸಿದರು.

ಕೋಶಾಧಿಕಾರಿ ವಿಶ್ವನಾಥ ಗೌಡ, ಜಂಟಿ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಹಾಗೂ ವೀಣಾ ದೇವಿ ಸಹಕರಿಸಿದರು.ವಿವಿಧ ಶಾಲಾ-ಕಾಲೇಜುಗಳಿಂದ ಒಟ್ಟು 158 ವಿದ್ಯಾರ್ಥಿಗಳು ಹಾಗೂ ಸ್ಕೌಟ್‌-ಗೈಡ್‌ ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯ ಫಲಿತಾಂಶ

ಬುಲ್‌ಬುಲ್ ವಿಭಾಗ:ಪ್ರಥಮ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮೀಕೋಡಿ.

ಗೈಡ್ ವಿಭಾಗ:ಪ್ರಥಮ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ

ದ್ವಿತೀಯ ಪಿ.ಎಂ. ಶ್ರೀ ಪ್ರೌಢಶಾಲೆ, ವಿಟ್ಲ (ಆರ್‌ಎಂಎಸ್‌ಎ)

ತೃತೀಯ : ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ.

ಸ್ಕೌಟ್ ವಿಭಾಗ:ಪ್ರಥಮ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ

ದ್ವಿತೀಯ : ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆ, ಒಡಿಯೂರು

ತೃತೀಯ : ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ.

ರೇಂಜರ್ಸ್ ವಿಭಾಗ:ಪ್ರಥಮ ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ.ಅಳಿಕೆ, ಮಾದರಿ, ಸರಸ್ವತಿ ವಿದ್ಯಾಲಯ ಕನ್ಯಾನ, ಕೆಪಿಎಸ್ ಕನ್ಯಾನ, ಒಡಿಯೂರು, ಜನತಾ ಪ್ರೌಢಶಾಲೆ ಅಡ್ಯನಡ್ಕ, ಲಕ್ಷ್ಮೀಕೋಡಿ ಹಾಗೂ ವಿಠಲ ಹೈಸ್ಕೂಲ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

- Advertisement -

Related news

error: Content is protected !!