Wednesday, July 22, 2026
spot_imgspot_img
spot_imgspot_img

ಗದಗ:ಅಪರೂಪದ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆ!

- Advertisement -
- Advertisement -

ಗದಗ: ಲಕ್ಕುಂಡಿಯಲ್ಲಿ 9ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದ್ದು, ಬಗೆದಷ್ಟು ಪ್ರಾಚ್ಯಾವಶೇಷಗಳು ಬಯಲಾಗುತ್ತಲೇ ಇವೆ. ಕಳೆದ 8 ದಿನಗಳಿಂದಲೂ ಉತ್ಖನನ ವೇಳೆ ಒಂದಿಲ್ಲೊಂದು ಪುರಾತನ ವಸ್ತುಗಳು ಸಿಗುತ್ತಲೇ ಇವೆ. ಈ ನಡುವೆ ಮತ್ತೊಂದೆಡೆ ಅಪರೂಪದ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಜೊತೆ ಬಾವಿಯಲ್ಲಿ ಪುರಾತನ ಶಿಲೆಗಳು ಪತ್ತೆಯಾಗಿರೋದು ಅಚ್ಚರಿ ಮೂಡಿಸಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

ಲಕ್ಕುಂಡಿ ಗ್ರಾಮದ ಷಣ್ಮುಖಪ್ಪರವದಿ ಎಂಬುವರ ಜಮೀನಿನಲ್ಲಿ ಈ ಅಪರೂಪದ ಶಿಲಾಮೂರ್ತಿ ಪತ್ತೆಯಾಗಿದ್ದು, ಪತ್ತೆಯಾದ 7 ಹೆಡೆಯ ಅಪರೂಪದ ಶಿಲೆ ವಿಜಯನಗರ ಅರಸರ ಕಾಲಕ್ಕೆ ಸೇರಿದೆ ಎನ್ನಲಾಗಿದೆ. 7 ಹೆಡೆಯುಳ್ಳ ನಾಗರ ಹಾವಿನ ಶಿಲೆ ಅಕ್ಕ ಪಕ್ಕ 2 ಹೆಡೆಯ 7 ಶಿಲೆಗಳು ಪತ್ತೆಯಾಗಿವೆ. ಸುಂದರ ಉಬ್ಬು ಕೆತ್ತನೆ ಇರುವ 7 ಹೆಡೆಯ ಸರ್ಪದ ಶಿಲೆ ನೆಲದಲ್ಲಿ ಹುದುಗಿ ಹೋಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಲಕ್ಕುಂಡಿ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದು, ಇಡೀ ಊರಿನಲ್ಲಿ ಏನೆಲ್ಲಾ ಸಿಗಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇದೀಗ ತೋಟದ ಬಾವಿಯೊಂದರಲ್ಲಿ ಶಿಲೆಗಳು ಪತ್ತೆಯಾಗಿವೆ. ಸುಮಾರು ನೂರು ವರ್ಷದಷ್ಟು ಹಳೆಯ ಕಾಲದ ಬಾವಿಯ ಗೋಡೆಯಲ್ಲಿ ಶಿಲೆಗಳಿವೆ. ಈ ಶಿಲೆಗಳನ್ನು ಕಲ್ಲುಗಳ ಮಧ್ಯೆ ಇರಿಸಿಯೇ ಪ್ಲಾಸ್ಟಿಂಗ್ ಮಾಡಲಾಗಿದೆ. ದಾನ ಶಿಲೆ, ದ್ವಾರಪಾಲಕನ ಶಿಲೆ, ಬೋದಿಗೆ ಶಿಲೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

- Advertisement -

Related news

error: Content is protected !!