Sunday, October 25, 2026
spot_imgspot_img
spot_imgspot_img

ಕೌಟುಂಬಿಕ ವಿವಾದದ ಹಿನ್ನಲೆ- ಎಐಎಡಿಎಂಕೆ ಪದಾಧಿಕಾರಿಯ ಶಿರಾಚ್ಚೆದನ

- Advertisement -
- Advertisement -

ಮಧುರೈ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ 6 ಮಂದಿಯ ತಂಡವೊಂದು ಎಐಎಡಿಎಂಕೆ ಪದಾಧಿಕಾರಿಯೊಬ್ಬರ ಶಿರಚ್ಛೇದನ ಮಾಡಿದ ಘಟನೆ ಸಾಮನಾಥಮ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಎಂ. ಧನಸೇಕರಪಾಂಡಿಯನ್ ಆಲಿಯಾಸ್ ಸೆಂಥಿಲ್ (38) ಅವರು ಸಾಮನಾಥಮ್‌ನಲ್ಲಿ ಎಐಎಡಿಎಂಕೆಯ ಯುವಜನ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. ಸಾಮನಾಥಮ್ ನಡುಂಗಲಂ ಮುಖ್ಯ ರಸ್ತೆಯಲ್ಲಿ ಅವರ ಚಹಾ ಅಂಗಡಿ ನಡೆಸುತ್ತಿದ್ದರು. ಅಲ್ಲಿ ತಂಡ ಅವರ ಶಿರಚ್ಛೇದನ ಮಾಡಿದೆ.

ಆರಂಭದಲ್ಲಿ ಮಧ್ಯ ಸೇವಿಸಿ ಗಲಾಟೆ ಮಾಡುವುದನ್ನು ಪ್ರಶ್ನಿಸಿರುವುದಕ್ಕೆ ಸೆಂಥಿಲ್ ಅವರನ್ನು ತಂಡ ಹತ್ಯೆಗೈದಿದೆ ಎಂಬ ವಂದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು.

ಅನಂತರ ಪೊಲೀಸ್ ವರಿಷ್ಠ ಬಿ.ಕೆ. ಅರವಿಂದ, ವಾಗ್ವಾದದ ಕಾರಣಕ್ಕೆ ಸೆಂಥಿಲ್ ಹತ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ. ಸೆಂಥಿಲ್ ಅವರ ಪತ್ನಿಯ ಅನೈತಿಕ ಸಂಬಂಧದ ಕುರಿತ ವಿವಾದ ಈ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

ಮೂವರನ್ನು ಬಂಧಿಸಲಾಗಿದೆ. ಇತರನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧಿತರಾದ ಮೂವರಲ್ಲಿ ಇಬ್ಬರು ಅಪ್ರಾಪ್ತರು. ಪರಾರಿಯಾಗಿರುವ ಪ್ರಮುಖ ಆರೋಪಿ ಕುಟ್ಟಿ ಕಾರ್ತಿಕ್‌ಗೆ ಸೆಂಥಿಲ್ ಪತ್ನಿ ಕವಿಯಳೊಂದಿಗೆ ಅನೈತಿಕ ಸಂಬಂಧ ಇತ್ತು ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!