- Advertisement -
- Advertisement -


ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕೆಲ್ಲೂರಗ್ರಾಮದ ಬಳಿಯ ಹೆದ್ದಾರಿಯಲ್ಲಿ ಕೆಕೆಆರ್‌ಟಿಸಿ ಬಸ್ ಮಂಗಳವಾರ ಸಂಜೆ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಪೈಕಿ ಸಿಂಧನೂರಿನ ಶಿವಲಿಂಗಮ್ಮ ಸಿದ್ದಣ್ಣ, ಪದ್ಮ ಸತ್ಯನಾರಾಯಣ, ಶ್ರಾವ್ಯ ರಾಘವೇಂದ್ರ, ಭಾಗ್ಯಲಕ್ಷ್ಮೀ, ಮೀನಾಕ್ಷಿ, ಸಮರ್ಥ ಅವರು ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ಈ ಬಸ್ ಕಲಬುರಗಿ ನಗರದಿಂದ ಧರ್ಮಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಹೊರಟಿತ್ತು. ತಾಲ್ಲೂಕಿನ ಕೆಲ್ಲೂರ ಗ್ರಾಮದ ಬಳಿ ಚಾಲಕ ನೀರು ಕುಡಿಯುತ್ತಾ ಬಸ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.




ಕಲಬುರಗಿ ಬಸ್ ಘಟಕ-3ಕ್ಕೆ ಸೇರಿದ ಈ ಬಸ್‌ನಲ್ಲಿ 50ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು. ಗಾಯಗೊಂಡವರನ್ನು ತಕ್ಷಣವೇ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -







