Monday, October 26, 2026
spot_imgspot_img
spot_imgspot_img

47 ಲಕ್ಷ ರೂ. ಹಣದ ಜೊತೆ ಆಟೋ ಚಾಲಕನೊಂದಿಗೆ ಪರಾರಿಯಾದ ಕೋಟ್ಯಾಧಿಪತಿಯ ಹೆಂಡತಿ!

- Advertisement -
- Advertisement -

ಆಕೆಯ ಗಂಡ ಕೋಟ್ಯಾಧಿಪತಿ. ಆಕೆಗೆ ಮನೆಯಲ್ಲಿ ಏನೆಲ್ಲ ಬೇಕೋ ಅದೆಲ್ಲವೂ ಇತ್ತು. ಆದರೆ ಆಟೋ ಚಾಲಕನ ಪ್ರೇಮಪಾಶಕ್ಕೆ ಬಿದ್ದ ಕೋಟ್ಯಾಧಿಪತಿಯ ಹೆಂಡತಿ ಆತನೊಂದಿಗೆ ಪರಾರಿಯಾಗಿದ್ದಾಳೆ. ಅಷ್ಟೇ ಅಲ್ಲದೇ ಹೋಗುವಾಗ ಮನೆಯಲ್ಲಿದ್ದ 47 ಲಕ್ಷ ರೂ. ಹಣವನ್ನೂ ತೆಗೆದುಕೊಂಡು ಪರಾರಿಯಾದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಕೋಟ್ಯಾಧಿಪತಿಯಾಗಿದ್ದ ಉದ್ಯಮಿ ತನಗಿಂತಲೂ 13 ವರ್ಷ ಸಣ್ಣ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು. ಆಕೆಗೆ ಗಂಡನಿಂದ ಪ್ರೀತಿ ಸಿಕ್ಕಿರಲಿಲ್ಲ.

ಹೀಗಾಗಿ, ಆಟೋ ಚಾಲಕನೊಂದಿಗೆ ಸ್ನೇಹ ಬೆಳೆಸಿದ ಆಕೆ ಆತನೊಂದಿಗೆ ಪರಾರಿಯಾಗಿದ್ದಾಳೆ. ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ, ಮನೆಯಲ್ಲಿದ್ದ 47 ಲಕ್ಷ ರೂ. ಹಣವೂ ನಾಪತ್ತೆಯಾಗಿದೆ ಎಂದು ಆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉದ್ಯಮಿ ನೀಡಿದ ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದು, ಕೋಟ್ಯಾಧಿಪತಿಯ ಪತ್ನಿ ಹಾಗೂ ಆಟೋ ರಿಕ್ಷಾ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಟೊರಿಕ್ಷಾ ಚಾಲಕನ ಹೆಸರು ಇಮ್ರಾನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಚಾಲಕ ಮತ್ತು ಆರೋಪಿ ಮಹಿಳೆಯ ಪತ್ತೆಗಾಗಿ ಪೊಲೀಸರು ಮೇಲಿನ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ವಿಚಾರಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಅನುಮಾನಗೊಂಡ ವ್ಯಕ್ತಿಯ ಮನೆಗೆ ತೆರಳಿ ವಿಚಾರಿಸಿದಾಗ ಅಲ್ಲಿ 33 ಲಕ್ಷ ರೂ ಸಿಕ್ಕಿದೆ. ಕೊನೆಗೆ ಆ ವ್ಯಕ್ತಿ ಇಮ್ರಾನ್​ನ ಸ್ನೇಹಿತ ಎಂಬುದು ಗೊತ್ತಾಗಿದೆ.

- Advertisement -

Related news

error: Content is protected !!