Sunday, April 28, 2024
spot_imgspot_img
spot_imgspot_img

ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಇದರ ಆಶ್ರಯದಲ್ಲಿ 47 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -G L Acharya panikkar
- Advertisement -

ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿಸರ್ಜನಾ ಮೆರವಣಿಗೆ

ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಇದರ ಆಶ್ರಯದಲ್ಲಿ 47 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ನಡೆಯಿತು.

ಬೆಳಗ್ಗೆ ಸತ್ಯ ಸುಂದರ ಭಟ್ ಕಲ್ಮಲೆ ಪ್ರಗತಿಪರ ಕೃಷಿಕರು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮಧ್ಯಾಹ್ನ ಸೀತಾರಾಮ ಕೇವಳ, ಪ್ರಾಂಶುಪಾಲರು ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾಮ್ ದಾಸ್ ಶೆಟ್ಟಿ (Vtv) ಅಧ್ಯಕ್ಷರು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು, ವಸಂತ ವೀರಮಂಗಲ ನಿರ್ದೇಶಕರು ಪ್ರೇರಣ ಉನ್ನತ ಶಿಕ್ಷಣ ತರಬೇತಿ ಕೇಂದ್ರ ಪುತ್ತೂರು, ಚೇತನ್ ಶೆಟ್ಟಿ ಪೆಲ್ತಡ್ಕ, ಅಧ್ಯಕ್ಷರು ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ, ದೇವದಾಸ ರೈ ಮಾಡದಾರು, ಮಾಜಿ ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ, ಸಂದೀಪ್ ಪೂಜಾರಿ ಪೆಲ್ತಡ್ಕ ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಉಪಸ್ಥಿತರಿದ್ದರು.

ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಸಂತೋಷ್ ಕುಮಾರ್ ಪೆಲ್ತಡ್ಕ ಸ್ವಾಗತಿಸಿ, ಜಗದೀಶ್ ರೈ ನಡುವಳಚಿಲ್ ಧನ್ಯವಾದ ಗೈದರು. ಉದಯ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕೆಲಿಂಜ ಗ್ರಾಮದಲ್ಲಿ 2022 23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿವಿದ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.

ಶ್ರೀ ದೇವರಿಗೆ ಮಧ್ಯಾಹ್ನದ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಬಳಿಕ ಆಕರ್ಷಣೀಯ ಕುಣಿತ ಭಜನೆಯೊಂದಿಗೆ ಸಾಗಿ ಬಂದ ಶೋಭಯಾತ್ರೆ ಮೆರವಣಿಗೆಯು ಒಕ್ಕೆತ್ತೂರಿನಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಲಾಯಿತು.

- Advertisement -

Related news

error: Content is protected !!