Thursday, June 30, 2022
spot_imgspot_img
spot_imgspot_img

50.ರೂ.ಗಾಗಿ ತನ್ನ ಸ್ನೇಹಿತನನ್ನೇ ಕೊಲೆಗೈದ ಗೆಳೆಯ

- Advertisement -
- Advertisement -

ಬೆಂಗಳೂರು: ಬೆಂಗಳೂರು ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ 50 ರೂ.ಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಶಿವಮಾಧು (24) ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಶಾಂತಕುಮಾರ್ ಕೊಲೆ ಮಾಡಿದ ಆರೋಪಿ.

ಕೊಲೆಯಾದ ಯುವಕ ಶಿವಮಾಧು

ರಾತ್ರಿ ಇಬ್ಬರೂ ಕುರಬರಹಳ್ಳಿ ಸರ್ಕಲ್ ನಲ್ಲಿರುವ ಸೈಬರ್‌ ಸೆಂಟರ್‌ಗೆ ಹೋಗಿದ್ದಾರೆ. ಈ ವೇಳೆಯಲ್ಲಿ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂ. ತೆಗೆದಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.

ಕೊನೆಗೆ ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಓಡಿ ಹೋಗಿದ್ದಾನೆ. ಸ್ಥಳೀಯ ಜನರು ಶಿವಮಾಧುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶಿವಮಾಧು ಸಾವನ್ನಪ್ಪಿದ್ದಾನೆ ಅಂತ ತಿಳಿದು ಬಂದಿದೆ. ಇನ್ನೂ ಘಟನೆ ಬಗ್ಗೆ ಬಸವೇಶ್ವರ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ಆಧಾರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!