Tuesday, May 7, 2024
spot_imgspot_img
spot_imgspot_img

50 ದಿನ ಕ್ವಾರಂಟೈನ್‌ನಲ್ಲಿ ಕಳೆದ ಬಳಿಕ ಕುನೊ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಚೀತಾ; ವಿಡಿಯೊ ಟ್ವೀಟ್ ಮಾಡಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ಭಾರತಕ್ಕೆ ಚೀತಾಗಳನ್ನು ವಾಪಸ್ ಕರೆದುಕೊಂಡು ಬಂದ ಎರಡು ತಿಂಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೊಸ ಆವಾಸಸ್ಥಾನದಲ್ಲಿ ನೆಲೆಸಿರುವ ನಮೀಬಿಯಾದಿಂದ ಚೀತಾಗಳ ಕುರಿತು ಅಪ್ಡೇಟ್ಸ್ ಶೇರ್ ಮಾಡಿದ್ದಾರೆ. 50 ದಿನಗಳನ್ನು ಕ್ವಾರಂಟೈನ್‌ನಲ್ಲಿ ಕಳೆದ ನಂತರ, ಎಂಟು ಚೀತಾಗಳಲ್ಲಿ ಎರಡನ್ನು ದೊಡ್ಡ ಆವರಣದಲ್ಲಿ ಬಿಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ಒಳ್ಳೆಯ ಸುದ್ದಿ! ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ ಎಂದಿದ್ದಾರೆ. ಇತರ ಚೀತಾಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮೋದಿ ಹೇಳಿದರು.

“ಎಲ್ಲಾ ಚೀತಾಗಳು ಆರೋಗ್ಯವಾಗಿವೆ. ಚುರುಕಾಗಿದ್ದು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಇತರ ಚೀತಾಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು. ಎಂಟು ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಯಿತು. ಅಳಿವಿನಂಚಿನಲ್ಲಿ ಇದ್ದ ಇವುಗಳ್ನು ಎಪ್ಪತ್ತು ವರ್ಷಗಳ ನಂತರ ಭಾರತಕ್ಕೆ ಕರೆ ತರಲಾಗಿದೆ. ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ಬಿಡುಗಡೆ ಮಾಡಿದರು.

ಎಡ್ಡಿ ಮತ್ತು ಫ್ರೆಲ್ಟನ್ ಇನ್ನು ಮುಂದೆ ಸಂಪರ್ಕತಡೆಯಲ್ಲಿಲ್ಲದ ಎರಡು ಚೀತಾಗಳು. ಅವು ತಮ್ಮ ಹೊಸ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಂಡಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಿಸಿಎಫ್ ಅಧಿಕಾರಿಗಳು, ಡಬ್ಲ್ಯುಐಐ ವಿಜ್ಞಾನಿಗಳು ಮತ್ತು ಎಂಪಿ ಅರಣ್ಯ ಇಲಾಖೆಯ ಕ್ಷೇತ್ರ ತಜ್ಞರನ್ನು ಒಳಗೊಂಡಿರುವ ತಜ್ಞರ ಶಿಫಾರಸುಗಳ ಪ್ರಕಾರ ಇತರ ಆರು ಚೀತಾಗಳನ್ನು ನವೆಂಬರ್ 10 ರ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀತಾಗಳ ನಿರ್ವಹಣೆಗಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಚೀತಾ ಕಾರ್ಯಪಡೆಯನ್ನು ರಚಿಸುವುದಾಗಿ ಸರ್ಕಾರ ಘೋಷಿಸಿತ್ತು.

- Advertisement -

Related news

error: Content is protected !!