Wednesday, June 24, 2026
spot_imgspot_img
spot_imgspot_img

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಡೆಯಾರ್‌ಗೆ ಲಯನ್ಸ್ ಕ್ಲಬ್‌ನಿಂದ ಸನ್ಮಾನ

- Advertisement -
- Advertisement -


ಪುತ್ತೂರು, ಜೂ.24: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಲಯನ್ಸ್ ಜಿಲ್ಲೆಯ ಜಿಲ್ಲಾ ಸಂಪರ್ಕಾಧಿಕಾರಿಯಾಗಿರುವ ಸುದರ್ಶನ್ ಪಡೆಯಾರ್ ಅವರನ್ನು ಪುತ್ತೂರಿನಲ್ಲಿ ನಡೆದ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಂಗಳೂರು ಕ್ಲಬ್ ಅಧ್ಯಕ್ಷ ರಾಜೇಶ್ ಎಂ ಕಾಮತ್ ಅವರು ಸುದರ್ಶನ್ ಪಡೆಯಾರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಮಂಗಳೂರು ಕ್ಲಬ್‌ನ ಮಾಜಿ ಅಧ್ಯಕ್ಷ ವಿಜಯ ವಿಷ್ಣುಮಯ್ಯ, 2026-28ನೇ ಸಾಲಿನ ಅಧ್ಯಕ್ಷ ಹೇಮಾರಾವ್, ಕಾರ್ಯದರ್ಶಿ ಸೀಮಾ ಮಯ್ಯ, ರಚನಾ ಕಾಮತ್, ಕಾರ್ಯದರ್ಶಿ ವಿನಾಯಕ್ ಪೈ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ್ ಗೌಡ, ಕಾರ್ಯದರ್ಶಿ ಆನಂದ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷೆ ಪ್ರೇಮಲತಾ ರಾವ್, ಕೋಶಾಧಿಕಾರಿ ಸುಂದರ ಗೌಡ, ಕೃಷ್ಣಪ್ರಶಾಂತ್, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಆರ್‌ಸಿ ಆನಂದ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಸುದರ್ಶನ್ ಪಡೆಯಾರ್ ಅವರ ಸಮಾಜಮುಖಿ ಸೇವೆ ಹಾಗೂ ಸಂಘಟನಾ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಲಾಯಿತು.

- Advertisement -

Related news

error: Content is protected !!