Friday, November 27, 2026
spot_imgspot_img
spot_imgspot_img

KPSCಯ 13 ನೇಮಕಾತಿಯಲ್ಲಿ ಅಕ್ರಮ ಆರೋಪ; ವಿಧಾನಸೌಧ ಠಾಣೆಗೆ ಈ.ಡಿಗೆ ದೂರು

- Advertisement -
- Advertisement -

ಬೆಂಗಳೂರು : KPSCಯ 13 ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ
ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಈ.ಡಿ) ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ಈಡಿ ದೂರು ನೀಡಿದ್ದು, KPSCಯ 13 ನೇಮಕಾತಿಗಳಿಗೆ ಸಂಕಷ್ಟ ಎದುರಾಗಲಿದೆ.

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ ಈ ಹಿಂದೆ KPSCಯ 13 ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ದಾಖಲೆ ಸಮೇತ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ PMLA ಸೆಕ್ಷನ್ 66(2) ಅಡಿ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಿತ್ತು.

ಹೀಗಾಗಿ ಈ 13 ನೇಮಕಾತಿಗಳ ಅಕ್ರಮದ ಬಗ್ಗೆ ತನಿಖೆ ನಡೆಯಬೇಕು ಎಂದು ಜಾರಿ ನಿರ್ದೇಶನಾಲಯ ಸದ್ಯ ವಿಧಾನಸೌಧ ಠಾಣೆಗೆ ದೂರು ನೀಡಿದೆ. ಈಗಾಗಲೇ KPSC ನೇಮಕಾತಿ ಸಂಬಂಧ ಹೈಕೋರ್ಟ್ ನಿಂದಲೇ ಎಸ್ ಐ ಟಿ ರಚನೆ ಆಗಿರುವ ಕಾರಣ ವಿಧಾನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾದ ಬಳಿಕ ಈ ಪ್ರಕರಣವೂ ಎಸ್ ಐ ಟಿ ಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.

- Advertisement -

Related news

error: Content is protected !!