Thursday, November 12, 2026
spot_imgspot_img
spot_imgspot_img

ಅಮಿತಾಬ್ ಬಚ್ಚನ್ ನಿವಾಸಕ್ಕೆ ಮತ್ತೆ ಬಾಂಬ್ ಬೆದರಿಕೆ

- Advertisement -
- Advertisement -

ಮುಂಬೈ: ನಟ ಅಮಿತಾಬ್ ಬಚ್ಚನ್ ಅವರ ಮುಂಬೈ ನಿವಾಸ ‘ಜಲ್ಸಾ’ಗೆ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಅವರ ನಿವಾಸದ ಹೊರಗೆ ಬುಲೆಟ್‌ಪೂಫ್ ಗಾಜಿನ ಪರದೆ ಅಳವಡಿಸಿದ ಬೆನ್ನಲ್ಲೇ ಈ ಬೆದರಿಕೆ ಬಂದಿದೆ. ಮುಂಬೈ ಮೇಯ‌ರ್ ಕಚೇರಿ ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಭದ್ರತಾ ಸಿಬ್ಬಂದಿ ಇಮೇಲ್‌ನಲ್ಲಿ ಹೆಸರಿಸಲಾದ ಎಲ್ಲ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಅಮಿತಾಬ್ ಬಚ್ಚನ್ ಅವರ ನಿವಾಸಕ್ಕೆ ಇತ್ತೀಚಿನ ವಾರಗಳಲ್ಲಿ ಹಲವು ಬಾರಿ ಬಾಂಬ್ ಬೆದರಿಕೆ ಬಂದಿದೆ. ನ. 6ರಂದು ಕೂಡ ಅವರ ‘ಜಲ್ಸಾ’ ಬಂಗಲೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಗಲೆಯಲ್ಲಿ ಶೋಧ ನಡೆಸಿದ್ದರು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ.

ಇದಕ್ಕೂ ಮೊದಲು ಅ. 23ರಂದು ಮುಂಬೈ ಮೇಯ‌ರ್ ರಿತು ತಾವೆ ಮತ್ತು ಉಪ ಮೇಯ‌ರ್ ಸಂಜಯ್ ಘಾಡಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ಪ್ರಧಾನ ಕಚೇರಿಯಲ್ಲಿರುವ ಮೇಯ‌ರ್ ಕಚೇರಿ, ಅಮಿತಾಬ್ ಬಚ್ಚನ್ ಅವರ ನಿವಾಸ ಹಾಗೂ ನ. 27ರಂದು ಮಹಾಲಕ್ಷ್ಮಿ ರೇಸ್‌ಕೋರ್ಸ್ ನಲ್ಲಿ ನಡೆಯಲಿರುವ ಗಾಯಕ ದಿಶ್ಚಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಅದರಲ್ಲಿ ಹೇಳಲಾಗಿತ್ತು.

ಅ. 31ರಂದು ಶಾಲೆಯೊಂದರ ಮೇಲೆ ಗ್ರೆನೇಡ್ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಲಾಗಿತ್ತು.ಅ. 23ರಂದು ಮೇಯ‌ರ್ ಕಚೇರಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಬಳಿಕ ಬಂದ ಮತ್ತೊಂದು ಇಮೇಲ್‌ನಲ್ಲಿ ಬಾಂಬೆ ಹೈಕೋರ್ಟ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಜುಹು ಪ್ರದೇಶದಲ್ಲಿರುವ ಬಚ್ಚನ್ ಅವರ ‘ಜಲ್ಸಾ’ ನಿವಾಸದ ಹೆಸರನ್ನೂ ಉಲ್ಲೇಖಿಸಲಾಗಿತ್ತು.

- Advertisement -

Related news

error: Content is protected !!