Thursday, November 12, 2026
spot_imgspot_img
spot_imgspot_img

ಟೇಕ್‌ಆಫ್ ವೇಳೆ ರನ್ ವೇಯಿಂದ ಹೊರಜಾರಿದ ತರಬೇತಿ ವಿಮಾನ; ಪೈಲಟ್ ಸುರಕ್ಷಿತ

- Advertisement -
- Advertisement -

ಸೋಲಾಪುರ: ಟೇಕ್ ಆಫ್ ಆಗುವ ಪ್ರಯತ್ನದ ವೇಳೆ ತರಬೇತಿ ವಿಮಾನವೊಂದು ರನ್ ವೇಯಿಂದ ಹೊರಜಾರಿದ ಘಟನೆ ಮಹಾರಾಷ್ಟ್ರದ ಸೋಲಾಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.ತರಬೇತಿ ಪಡೆಯುತ್ತಿದ್ದ ಪೈಲಟ್ ವಿಮಾನವನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟೇಕ್‌ಆಫ್ ವೇಳೆ ವಿಮಾನವು ತನ್ನ ನಿಗದಿತ ಪಥದಿಂದ ಪಕ್ಕಕ್ಕೆ ಸರಿದು ರನ್ ವೇಯಿಂದ ಹೊರಕ್ಕೆ ಜಾರಿದೆ.

ಘಟನೆಯಲ್ಲಿ ಪೈಲಟ್ ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.ಘಟನಾ ಸ್ಥಳದ ದೃಶ್ಯಗಳಲ್ಲಿ ವಿಮಾನವು ಮುಂಭಾಗಕ್ಕೆ ಬಾಗಿರುವುದು ಹಾಗೂ ಅದರ ಮುಂಭಾಗದ ಭಾಗ (ನೋಸ್) ನೆಲಕ್ಕೆ ತಾಗಿಗುವುದು ಕಂಡುಬಂದಿದೆ.

- Advertisement -

Related news

error: Content is protected !!