ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ
ಅಕ್ಷಯ ಪಾತ್ರೆ ಸ್ಕೀಂನ ಅಸ್ತ್ರ ಗ್ರೂಪ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಹಕರು

ಮಂಗಳೂರು: ಮಂಗಳೂರಿನಲ್ಲಿರುವ ಅಸ್ತ್ರ ಗ್ರೂಪ್ನ ‘ಅಕ್ಷಯ ಪಾತ್ರೆ’ ಯೋಜನೆಯ ಕಚೇರಿಗೆ ಗ್ರಾಹಕರು ಮುತ್ತಿಗೆ ಹಾಕಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ವೈರಲ್ ಆಗಿರುವ ದೃಶ್ಯಗಳಲ್ಲಿ, ಕಚೇರಿಗೆ ಆಗಮಿಸಿದ ಗ್ರಾಹಕರು ಸಿಬ್ಬಂದಿಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಅಸ್ತ್ರ ಗ್ರೂಪ್ ಸಂಸ್ಥೆ ಮಾಸಿಕ ಕಂತುಗಳ ಮೂಲಕ ಹಣ ಸಂಗ್ರಹಿಸಿ, ಕಾರು, ಥಾರ್, ಪ್ಲಾಟ್ ಸೇರಿದಂತೆ ವಿವಿಧ ಬಹುಮಾನಗಳ ಭರವಸೆ ನೀಡಿ ಗ್ರಾಹಕರನ್ನು ಆಕರ್ಷಿಸಿತ್ತು ಎನ್ನಲಾಗಿದೆ.ಈ ಹಿಂದೆ ಕೂಡ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದ ವೇಳೆ, ಸಂಸ್ಥೆಯ ಮಾಲೀಕರಾದ ಲಂಚುಲಾಲ್ ಕೆ.ಎಸ್. ಅವರು ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಎಲ್ಲರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದರು.ಇದೀಗ ಮತ್ತೆ ಕಚೇರಿಗೆ ಗ್ರಾಹಕರು ಮುತ್ತಿಗೆ ಹಾಕಿದ್ದಾರೆ ಎಂಬ ಸುದ್ದಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಎನ್ನಲಾದ ವಿಡಿಯೊ ವೈರಲ್ ಆಗಿದ್ದು, ಈ ಘಟನೆಯ ಸತ್ಯಾಸತ್ಯತೆ ಹಾಗೂ ಅಧಿಕೃತ ಮಾಹಿತಿ ಇನ್ನಷ್ಟೇ ದೃಢಪಡಬೇಕಿದೆ. ಸಂಬಂಧಿತ ಅಧಿಕಾರಿಗಳು ಅಥವಾ ಸಂಸ್ಥೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.











