Saturday, July 18, 2026
spot_imgspot_img
spot_imgspot_img

ಮೂಡಬಿದಿರೆ: ತಲವಾರು ಹಿಡಿದು ಅಂಗಡಿಗೆ ನುಗ್ಗಿದ ಯುವಕನ ಹೈಡ್ರಾಮಾ-ಸ್ಥಳೀಯರ ಸಮಯಪ್ರಜ್ಞೆಯಿಂದ ಯುವಕ ಪೊಲೀಸ್‌ ವಶಕ್ಕೆ

- Advertisement -
- Advertisement -

ಮೂಡಬಿಡಿರೆ: ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಜು.18ರಂದು ಮಧ್ಯಾಹ್ನ ಯುವಕನೋರ್ವ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ಪ್ರಸಂಗ ಕೆಲಸಮಯ ಆತಂಕಕ್ಕೆ ಕಾರಣವಾಯಿತು.

ಬಸ್ಸು ನಿಲ್ದಾಣದಲ್ಲಿರುವ ಮೊಬೈಲ್‌ ಅಂಗಡಿಯೊಂದಕ್ಕೆ ತಲವಾರು ಹಿಡಿದುಕೊಂಡು ಹೋದ ಯುವಕ ನೇರವಾಗಿ ಮೊಬೈಲ್ ಅಂಗಡಿಯವರಲ್ಲಿ ಗಲಾಟೆಗಿಳಿದಿದ್ದಾನೆ. ಗ್ರಾಹಕರು ಇರುವಾಗಲೇ ತಲವಾರು ಝಳಪಿಸಿದ ಯುವಕನನ್ನು ಅಲ್ಲಿನ ಕೆಲ ಯುವಕರು ಉಪಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಮೊದಲು ತಾನು ಬೆಳ್ತಂಗಡಿಯ ಪೆರಿಂಜೆಯವನು ಎಂದು ಹೇಳಿಕೊಂಡಿರುವ ಯುವಕ ತನಗೆ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿದ್ದಾನೆ ಎಂದು ಹೇಳಿದ್ದಾನೆನ್ನಲಾಗಿದೆ.

ಆತ ಕೈಯಲ್ಲಿ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿ ಹೋಗುವುದು ಮತ್ತು ಮೊಬೈಲ್ ಅಂಗಡಿಯವರಲ್ಲಿ ಜಗಳ ಮಾಡುವ ವೀಡಿಯೋ ವೈರಲ್ ಆಗಿದೆ.ಪೊಲೀಸರು ಈ ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈತ ಪೆರಿಂಜೆ ನಿವಾಸಿ ಎಂಬುದು ಇನ್ನೂ ಖಚಿತವಾಗಿಲ್ಲ.

- Advertisement -

Related news

error: Content is protected !!