Thursday, June 18, 2026
spot_imgspot_img
spot_imgspot_img

ಕೋಟ: ಅಕ್ರಮ ಮರಳುಗಾರಿಕೆಗೆ ಪೊಲೀಸ್‌ ದಾಳಿ; ಆರೋಪಿಗಳು ಪರಾರಿ; ವಾಹನ, ಮರಳು ವಶಕ್ಕೆ

- Advertisement -
- Advertisement -

ಕೋಟ: ನಂಚಾರು ಗ್ರಾಮದ ಚೀನಿಬೆಟ್ಟು ಚೌಂಡಾಲ ಸೀತಾನದಿ ಹೊಳೆಯಲ್ಲಿ ಅ.8ರಂದು ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಾಳಿ ನಡೆಸಿದ ಕೋಟ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಪಿಕ್‌ಅಪ್ ವಾಹನ ಹಾಗೂ ಸುಮಾರು 5,000ರೂ. ಮೌಲ್ಯದ ಮರಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಗಣೇಶ್ ಶೆಟ್ಟಿ ನಂಚಾರು ಹಾಗೂ ಚೇತನ ನಾಯ್ಕ ಎಂಬವರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!