Wednesday, April 24, 2024
spot_imgspot_img
spot_imgspot_img

ದಾಖಲೆ ಬರೆದ 65ರ ‘ಈಜು ಪಟು’!

- Advertisement -G L Acharya panikkar
- Advertisement -

ಉಡುಪಿ: 65 ವರ್ಷದ ಈಜು ಪಟು ಗಂಗಾಧರ ಜಿ.ಕಡೆಕಾರ್​ ಎಂಬುವವರು ಮಲ್ಪೆ ಸಮೀಪದ ಪಡುಕೆರೆಯಲ್ಲಿ ಸಮುದ್ರದ ಅಲೆಯಬ್ಬರದ ನಡುವೆ ಕಾಲಿಗೆ ಸರಪಳಿ ಹಾಕಿಕೊಂಡು ಪದ್ಮಾಸನದಲ್ಲಿ ಈಜಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಸಾಧಿಸುವ ಮನಸ್ಸಿದ್ದರೆ ಯಾವುದೂ ಅಡ್ಡಿಯುಂಟು ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ. ಸಾಮಾನ್ಯವಾಗಿ ವಯಸ್ಸಾಯಿತೆಂದರೆ ಮೂಲೆಗೆ ಸೇರಿಕೊಳ್ಳುವವರ ನಡುವೆ ಈ ವ್ಯಕ್ತಿ ವಿಭಿನ್ನವಾದ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈಜುವುದು ಸಾಮಾನ್ಯವಾಗಿ ಸಾಹಸವೇ. ಅದರಲ್ಲೂ ಸಮುದ್ರದಲ್ಲಿ ಅಲೆಗಳ ಅಬ್ಬರದ ನಡುವೆ ಈಜು ಸಾಮಾನ್ಯವಂತು ಅಲ್ಲವೇ ಅಲ್ಲ. ಅಂಥದರಲ್ಲಿ ಈ 65 ವರ್ಷದ ವ್ಯಕ್ತಿ ಅದು ಕಾಲಿಗೆ ಸರಪಳಿ ಕಟ್ಟಿಕೊಂಡು ಪದ್ಮಾಸನದಲ್ಲಿ ಈಜಿ ದಾಖಲೆ ಬರೆದಿದ್ದಾರೆ.

ನಮಗೆ ವಯಸ್ಸಾಯ್ತು ಇನ್ನೇನು ಇದೆಲ್ಲಾ ನಮಗ್ಯಾಕೆ ಅನ್ನೋ ವೃದ್ಧರಿಗೆ, ಮಾದರಿಯಾಗಿ ನಿಂತಿದ್ದಾರೆ. ಕಾಲಿಗೆ ಸರಪಳಿ ಕಟ್ಟಿಕೊಂಡೇ ಸುಮಾರು 1 ಗಂಟೆ 13 ನಿಮಿಷ 7 ಸೆಕೆಂಡ್​ಗಳು ಸಮುದ್ರದಲ್ಲಿ ಈಜಿದ್ದಾರೆ ಅದೂ ಸಾಮಾನ್ಯವಾಗಿ ಅಲ್ಲ ಪದ್ಮಾಸನದ ಭಂಗಿಯಲ್ಲಿ ಈ ರೀತಿಯ ಸಾಧನೆ ಮಾಡಿದ್ದಾರೆ. ಬೆಳಗ್ಗೆ 8.36ರ ಸಮಯದಲ್ಲಿ ಸಮುದ್ರಕ್ಕೆ ಹಾರಿದ ಗಂಗಾಧರ್​​ 9.40ಕ್ಕೆ ದಡಕ್ಕೆ ವಾಪಸ್ಸಾಗಿದ್ದಾರೆ. ಲೋಟಸ್​​ ಫ್ಲೋಟ್ (ತಾವರೆ ತೇಲುವ)​ ಶೈಲಿಯಲ್ಲಿ ಸಮುದ್ರದಲ್ಲಿ ಈಜಿದ ಗಂಗಾಧರ್​ ಸಾಹಸ ಇಂಡಿಯಾ ಬುಕ್​ ಆಫ್​ ರೆಕಾರ್ಡ್​‌ನಲ್ಲಿ ದಾಖಲಾಗಿದೆ.

- Advertisement -

Related news

error: Content is protected !!