Saturday, May 4, 2024
spot_imgspot_img
spot_imgspot_img

ಕೇವಲ 750 ರೂ. ಸಾಲದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

- Advertisement -G L Acharya panikkar
- Advertisement -

ಕೇವಲ 750 ರೂಪಾಯಿ ಸಾಲಕ್ಕೆ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ಕೊಪ್ಪ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಹಿರೇ ಬಳ್ಳೇಕೆರೆ ಗ್ರಾಮದ ಕೊಪ್ಪಪಟ್ಟಣದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಶ್ರೀನಿವಾಸ್ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

750 ರೂಪಾಯಿ ಸಾಲ ಮಾಡಿಕೊಂಡಿದ್ದ. ಆದರೆ ಹಾಸ್ಟೆಲ್​ ಸಿಬ್ಬಂದಿ 750 ರೂಪಾಯಿ ಸಾಲ ಕೊಟ್ಟು ಮೂರು ಸಾವಿರ ಹಣ ಕೇಳಿರೋ ಆರೋಪ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್​ನೋಟ್​ ಬರೆದಿಟ್ಟು ಆಗಸ್ಟ್ 22ರಂದು ಕೊಪ್ಪದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡಿದ್ದಾನೆ. ಸದ್ಯ ಶ್ರೀನಿವಾಸ್ ಬರೆದಿಟ್ಟ ಡೆತ್ ನೋಟ್ ಏಕಾಏಕಿ ವೈರಲ್ ಆಗಿದೆ. ಇನ್ನು ಡೆತ್ ನೋಟ್ ನಲ್ಲಿ ಸಾವಿಗೆ ಕಾರಣವನ್ನು ಶ್ರೀನಿವಾಸ್​ ಬರೆದಿದ್ದಾನೆ.

ಮಗನ ಸಾವಿಗೆ ಮಾಜಿ ಯೋಧ ಕಣ್ಣೀರಿಟ್ಟಿದ್ದಾರೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ -ತಾಯಿ ಗೋಗರೆದಿದ್ದಾರೆ. ಒಂದು ವೇಳೆ ಈ ಸಾವಿಗೆ ನ್ಯಾಯ ಸಿಗದಿದ್ದರೆ ಎಸ್ ಪಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ನಿರ್ಧಾರಿಸಿದ್ದಾರೆ.

- Advertisement -

Related news

error: Content is protected !!