

ಮಂಗಳೂರು: ನೇತ್ರಾವತಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 6ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ PDG ಸಂಜಿತ್ ಶೆಟ್ಟಿಯವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಡಾ. ವಿದ್ಯಾಧರಿ ಶೆಟ್ಟಿ, ಕಾರ್ಯದರ್ಶಿಯಾಗಿ Ln. ಶೋಭಾ ಸುಬ್ರಮಣ್ಯ ಹಾಗೂ ಖಜಾಂಜಿಯಾಗಿ Ln. ಸುಪಲಾ ಗೋಪಾಲ್ ಅಧಿಕಾರ ಸ್ವೀಕರಿಸಿದರು.ಕಾರ್ಯಕ್ರಮದ ಅಂಗವಾಗಿ ನೂತನ ಅಧ್ಯಕ್ಷೆ ಡಾ. ವಿದ್ಯಾಧರಿ ಶೆಟ್ಟಿ ಅವರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ವಿತರಿಸಿದರು. ಅಲ್ಲದೆ, ಸುಮಾರು ₹3.5 ಲಕ್ಷ ಮೌಲ್ಯದ ವಿವಿಧ ಸೇವಾ ಕಾರ್ಯಗಳಿಗೆ ಸಂಬಂಧಿಸಿದ ಚೆಕ್ಕುಗಳನ್ನು ವಿತರಿಸಿ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಲಯನ್ಸ್‌ನ ಮಾಜಿ ಗವರ್ನರ್ PMCC ವಸಂತ್ ಕುಮಾರ್ ಶೆಟ್ಟಿ, PDC ಅರುಣ್ ಶೆಟ್ಟಿ, PDG ಆಲ್ವಿನ್ ಪತ್ರಾವ್, PDG ಜೆ.ಕೆ. ರಾವ್, ಕ್ಯಾಬಿನೆಟ್ ಕಾರ್ಯದರ್ಶಿ Ln. ಪ್ರಶಾಂತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ Ln. ವಿನಯ ಶೆಟ್ಟಿ, ಪ್ರಾಂತೀಯ ಅಧ್ಯಕ್ಷೆ Ln. ಆಶಾ ನಾಗರಾಜ್ ಹಾಗೂ ವಲಯಾಧ್ಯಕ್ಷ Ln. ಸಂತೋಷ್ ಪೂಂಜಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.









