Monday, May 6, 2024
spot_imgspot_img
spot_imgspot_img

85 ವರ್ಷದ ವರ.! 65 ವರ್ಷದ ವಧು..! ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

- Advertisement -G L Acharya panikkar
- Advertisement -
suvarna gold
vtv vitla
vtv vitla
vtv vitla

ಮೈಸೂರು: ಮದುವೆ ಆಗೋದಕ್ಕೆ ವಯಸ್ಸಿನ ಹಂಗಿಲ್ಲ. ಇಲ್ಲೊಬ್ಬರು 85 ವರ್ಷವಾದ್ರೂ, ತನ್ನ ಇಳಿ ವಯಸ್ಸಿನಲ್ಲಿಯೂ ಜೊತೆಗೊಬ್ಬರು ಸಂಗಾತಿ ಬೇಕು ಅಂತ 65 ವರ್ಷದಾಕೆಯನ್ನು ವರಿಸಿದ್ದಾರೆ. ಇವರಿಬ್ಬರಿಗೆ ಕುಟುಂಬಸ್ಥರೇ ಮುಂದೆ ನಿಂತು ಮದುವೆ ಮಾಡಿಕೊಟ್ಟಿದ್ದಾರೆ.

ಅಂದಹಾಗೆ ಈ ಘಟನೆ ಮೈಸೂರಿನಲ್ಲಿ ನಡೆದಿದೆ. ಉದಯಗಿರಿಯ ಗೌಸಿಯಾನಗರದ ನಿವಾಸಿಯಾಗಿದ್ದಂತ ಹಾಜಿ ಮುಸ್ತಾಫಾ ಅವರು, ಕುರಿ ಸಾಕಾಣಿಕೆ ಕೆಲಸ ಮಾಡುತ್ತಾ, ತಮ್ಮ ಮಕ್ಕಳನ್ನು ಮದುವೆ ಮಾಡಿ, ಉತ್ತಮ ಜೀವನ ನಡೆಸುತ್ತಿದ್ದರು. ಇವರ ಪತ್ನಿ ಕಳೆದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಳು. ಹೀಗಾಗಿ ಇಳಿ ವಯಸ್ಸಿನಲ್ಲಿಯೂ ತಮಗೊಬ್ಬರು ಬಾಳ ಸಂಗಾತಿ ಬೇಕು ಅಂತ ಹುಡುಕಾಟ ನಡೆಸಿದ್ದಾರೆ.

ಈ ವೇಳೆಯಲ್ಲಿಯೇ ಗೌಸಿಯಾನಗರದಲ್ಲಿಯೇ ಒಂಟಿ ಜೀವನ ಸಾಗಿಸುತ್ತಿದ್ದಂತ ಫಾತಿಮಾ ಬೇಗಂ ಎಂಬುವರನ್ನು ತಾನು ಮದುವೆಯಾಗೋದಕ್ಕೆ ಸಿದ್ಧನಿದ್ದೇನೆ. ನನ್ನ ಮದುವೆ ಆಗ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ಫಾತಿಮಾ ಬೇಗಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಸ್ತಾಫಾ ತಾನು ಮತ್ತೊಂದು ಮದುವೆ ಆಗೋ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ. ಆಗ ಮಕ್ಕಳೇ ಸರಳವಾಗಿ ಮನೆಯಲ್ಲಿಯೇ 85 ವರ್ಷದ ಹಾಜಿ ಮುಸ್ತಾಫಾ ಹಾಗೂ ಫಾತಿಮಾ ಬೇಗಂ(65) ಅವರಿಬ್ಬರು ನಿಖಾ ಆಗಿದ್ದಾರೆ. ಈ ಮೂಲಕ ಇಳಿ ವಯಸ್ಸಿನಲ್ಲಿಯೂ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

- Advertisement -

Related news

error: Content is protected !!