Thursday, June 18, 2026
spot_imgspot_img
spot_imgspot_img

ವಿಟ್ಲ: ಪಂಚಾಯತ್‌ ಕೊಳವೆಬಾವಿಗೆ ಬೈಕ್ ಚೈನ್ ಹಾಗೂ ಇನ್ನಿತರ ಕಬ್ಬಿಣ ವಸ್ತುಗಳನ್ನು ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು..!!

- Advertisement -
- Advertisement -
vtv vitla

ವಿಟ್ಲ: ಪಂಚಾಯತ್‌ನ ಕೊಳವೆಬಾವಿಗೆ ಕಿಡಿಗೇಡಿಗಳು ಬೈಕ್ ಚೈನ್ ಹಾಗೂ ಇನ್ನಿತರ ಕಬ್ಬಿಣ ವಸ್ತುಗಳನ್ನು ಹಾಕಿ ವಿಕೃತಿ ಮೆರೆದ ಘಟನೆ ವಿಟ್ಲಮುಡ್ನೂರು ಗ್ರಾಮದ ದಾಸರಕೋಡಿ ಎಂಬಲ್ಲಿ ನಡೆದಿದೆ.

ಪಂಚಾಯತ್‌ನ ಕುಡಿಯುವ ನೀರಿನ ಬೋರ್‌ವೆಲ್‌ಗೆ ಬೈಕ್ ಚೈನ್ ಹಾಗೂ ಇನ್ನಿತರ ಕಬ್ಬಿಣದ ವಸ್ತುಗಳು ಯಾರೋ ಕಿಡಿಗೇಡಿಗಳು ಹಾಕಿದ್ದು, ಬೋರ್‌ವೆಲ್‌ ಪ್ರೆಸ್ಸಿಂಗ್ ಮಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಸ್ತುವನ್ನು ಹಾಕಿದವರು ಬಂದು ವಾರದೊಳಗೆ ತನ್ನ ತಪ್ಪು ಒಪ್ಪಿಕೊಳ್ಳಬೇಕು. ಇಲ್ಲವಾದರೇ ಕಾರ್ಣಿಕ ಸ್ಥಲಕ್ಕೆ ಹರಕೆ ಇಡಲಾಗುವುದೆಂದು ಬ್ಯಾನರ್‌ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ನೀರಿಲ್ಲದೇ ಗ್ರಾಮಸ್ಥರು ಪರದಾಡಿದು, ಈ ವೇಳೆ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹಾಗೂ ವಿಟ್ಲಮುಡ್ನೂರು ಗ್ರಾಮಪಂಚಾಯತ್‌ನಿಂದಲೂ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ.

- Advertisement -

Related news

error: Content is protected !!