Friday, April 19, 2024
spot_imgspot_img
spot_imgspot_img

Breaking News: ದಸರಾ ರಜೆ ಬಳಿಕ 1ನೇ ತರಗತಿಯಿಂದಲೇ ಶಾಲಾ ಆರಂಭಕ್ಕೆ ಸರ್ಕಾರ ಚಿಂತನೆ?

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳು ತೆರೆದುಕೊಂಡಿದ್ದು 1 ರಿಂದ 5 ನೇ ತರಗತಿ ಶಾಲೆಗಳನ್ನು ದಸರಾ ನಂತರದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್ 10 ರಿಂದ 20 ರವರೆಗೆ ದಸರಾ ರಜೆ ಇದೆ. ದಸರಾ ರಜೆ ಬಳಿಕ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ವಿಟ್ಲ: ಕೇಸರಿ ಶಾಲು ಧರಿಸಿದರೆ ಹುಷಾರ್; ಅಡ್ಯನಡ್ಕದಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು

ಈಗಾಗಲೇ 6 ರಿಂದ 12ನೇ ತರಗತಿವರೆಗೂ ಭೌತಿಕ ತರಗತಿ ಆರಂಭಗೊ0ಡಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ 1-5 ನೇ ತರಗತಿ ಆರಂಭಿಸುವುದು ಸೂಕ್ತ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದೆ. ಈಗಾಗಲೇ ಖಾಸಗಿ ಶಾಲೆಗಳು ಮಧ್ಯವಾರ್ಷಿಕ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ಆರಂಭಿಸಿವೆ. ಪರೀಕ್ಷೆ ಮುಗಿದ ಬಳಿಕ ದಸರಾ ರಜೆ ಆರಂಭವಾಗಿ ಅ.21 ರಂದು ತರಗತಿ ಆರಂಭವಾಗಲಿವೆ. ಹೀಗಾಗಿ ಅ. 21 ರಿಂದಲೇ ರಾಜ್ಯದಲ್ಲಿ 1-5 ನೇ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

- Advertisement -

Related news

error: Content is protected !!